Publish Date: Thu, 04 Oct 2018 (14:09 IST)
Updated Date: Thu, 04 Oct 2018 (14:11 IST)
ಸರಕಾರಿ ನೌಕರರ ನಾನ್ ಪೆನ್ಷನ್ ಸ್ಕೀಮ್ ಬೇಡವೇ ಬೇಡ ಎನ್ನುವ ಹೋರಾಟ ತೀವ್ರಗೊಂಡಿದ್ದು, ವಿಭಿನ್ನವಾಗಿ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡ ಸರ್ಕಾರಿ ನೌಕರರು ಗಮನ ಸೆಳೆದಿದ್ದಾರೆ. ರಕ್ತವನ್ನು ಕೊಟ್ಟೇವು ಪಿಂಚಣಿ ಬಿಡೇವು ಎಂಬ ಹೋರಾಟವನ್ನು ನಡೆಸುತ್ತಿದ್ದಾರೆ. ಈಗ ಬರುತ್ತಿರುವ ಪಿಂಚಣಿ ವೃದ್ಧಾಪ್ಯ ವೇತನಕ್ಕಿಂತ ಕಡಿಮೆ ಇದ್ದು,
ಈ ಹಿಂದೆ ಇದ್ದಂತಹ ಪಿಂಚಣಿ ಸ್ಕೀಮ್ ವಿಧಾನವನ್ನೇ ಮುಂದುವರಿಸಬೇಕೆಂಬ ಒತ್ತಾಯ ಮಾಡಲಾಗಿದೆ.
ಸರ್ಕಾರಿ ನೌಕರರು ರಕ್ತದಾನ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು. 500 ಸರ್ಕಾರಿ ನೌಕರರಿಂದ ರಕ್ತದಾನ ಮಾಡುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಕ್ತ ನೀಡುವುದರ ಮೂಲಕ ಪ್ರತಿಭಟನೆ ನಡೆಸಲಾಯಿತು.