Select Your Language

Notifications

webdunia
webdunia
webdunia
webdunia

ಮಹಾಲಕ್ಷ್ಮಿ ಮರ್ಡರ್ ಗೆ ನಿಜ ಕಾರಣವೇನು, ಮೃತದೇಹವನ್ನು ಪೀಸ್ ಮಾಡಿದ್ದು ಹೇಗೆ ಇಲ್ಲಿದೆ ಭೀಕರತೆಯ ವಿವರ

Mahalakshmi murder

Krishnaveni K

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (10:25 IST)
ಬೆಂಗಳೂರು: ವಯ್ಯಾಲಿಕಾವಲ್ ನ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಲು ಕಾರಣವೇನು ಮತ್ತು ಆಕೆಯ ಮೃತದೇಹವನ್ನು ಪೀಸ್ ಮಾಡಿದ್ದು ಹೇಗೆ ಎಂಬ ವಿಚಾರ ಈಗ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

29 ವರ್ಷದ ಮಹಾಲಕ್ಷ್ಮಿ ನೇಪಾಲ ಮೂಲದವಳಾಗಿದ್ದು, ಈಕೆಗೆ ಮದುವೆಯಾಗಿ ಒಂದು ಮಗುವೂ ಇತ್ತು. ಆದರೆ ಆಕೆಯ ವಿವಾಹೇತರ ಸಂಬಂಧದಿಂದ ಬೇಸತ್ತ ಗಂಡ ದೂರವಾಗಿದ್ದ. ಮಗು ಗಂಡನ ಜೊತೆಗಿತ್ತು. ತಿಂಗಳಿಗೊಮ್ಮೆ ಮಗುವನ್ನು ನೋಡಲು ಮಹಾಲಕ್ಷ್ಮಿ ಬರುತ್ತಿದ್ದಳು.
  
ಆಕೆ ಕೆಲಸ ಮಾಡುತ್ತಿದ್ದ ಮಾಲ್ ನಲ್ಲೇ ಮ್ಯಾನೇಜರ್ ಆಗಿದ್ದ ವ್ಯಕ್ತಿಯೊಂದಿಗೆ ಆಕೆಗೆ ಸಂಬಂಧವಿತ್ತು. ಈತನೇ ಈಗ ಆರೋಪಿ ಎನ್ನಲಾಗಿದೆ. ಕೆಲವು ಸಮಯದ ನಂತರ ಇಬ್ಬರ ನಡುವೆ ಮತ್ತೊಬ್ಬನ ಆಗಮನವಾಗಿತ್ತು. ಹೀಗಾಗಿ ಮೊದಲ ಪ್ರಿಯಕರನ ಜೊತೆ ಮನಸ್ತಾಪವಾಗಿತ್ತು. ಆದರೆ ಮಹಾಲಕ್ಷ್ಮಿ ಮತ್ತೊಬ್ಬನ ಜೊತೆ ಸಂಬಂಧ ಬೆಳೆಸುತ್ತಿರುವುದು ಸಹಿಸದ ಆರೋಪಿ ಎಚ್ಚರಿಕೆ ನೀಡಿದ್ದ.

ಆದರೂ ಮಹಾಲಕ್ಷ್ಮಿ ಆತನ ಮಾತಿಗೆ ಸೊಪ್ಪು ಹಾಕದೇ ಇದ್ದಾಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಹತ್ಯೆ ಬಳಿಕ ಆಕೆಯ ಮೃತದೇಹವನ್ನು ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಸಾಗಹಾಕಲು ಪ್ರಯತ್ನಿಸಿದ್ದ. ಸಾಧ್ಯವಾಗದೇ ಇದ್ದಾಗ ಫ್ರಿಡ್ಜ್ ನಲ್ಲಿ ತುಂಬಿದ್ದ. ವಿಚಿತ್ರವೆಂದರೆ ಇಷ್ಟೆಲ್ಲಾ ಘನಂದಾರಿ ಕೆಲಸ ಮಾಡಿದ ಬಳಿಕ ಆರೋಪಿ, ಮಹಾಲಕ್ಷ್ಮಿಯ ಸಹೋದರನಿಗೆ ಕರೆ ಮಾಡಿದ್ದ.

ಮೃತದೇಹ ಕತ್ತರಿಸಿದ್ದು ಹೇಗೆ?
ಮಹಾಲಕ್ಷ್ಮಿಯನ್ನು ಸಾಯಿಸಿ ಬಳಿಕ ಮೃತದೇಹವನ್ನು ಪೀಸ್ ಮಾಡಲಾಯಿತೇ ಎನ್ನುವುದು ಇನ್ನೂ ಖಚಿತವಾಗಿಲ್ಲ.  ಆದರೆ ಆಕ್ಸೆಲ್ ಬ್ಲೇಡ್, ಮಾಂಸ ಕತ್ತರಿಸುವ ಚಾಕು ಬಳಸಿ ಆಕೆಯ ಮೃತದೇಹವನ್ನು ಕತ್ತರಿಸಿದ್ದ ಎನ್ನುವುದು ಕನ್ ಫರ್ಮ್ ಆಗಿದೆ. ಬ್ಲೇಡ್, ಚಾಕುವಿನಿಂದ ಕತ್ತರಿಸಿದ ಬಳಿಕ ಮೃತದೇಹವನ್ನು ತುಂಡು ಮಾಡಿ ಸೂಟ್ ಕೇಸ್ ನಲ್ಲಿ ತುಂಬಲು ಯತ್ನಿಸಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾ ವೈದ್ಯೆ ಕೇಸ್ ಇಫೆಕ್ಟ್: ಕರ್ನಾಟಕದಲ್ಲಿ ಮಹಿಳಾ ವೈದ್ಯೆಯರಿಗೆ ಹೊಸ ರೂಲ್ಸ್