Select Your Language

Notifications

webdunia
webdunia
webdunia
webdunia

ಕೋಲ್ಕತ್ತಾ ವೈದ್ಯೆ ಕೇಸ್ ಇಫೆಕ್ಟ್: ಕರ್ನಾಟಕದಲ್ಲಿ ಮಹಿಳಾ ವೈದ್ಯೆಯರಿಗೆ ಹೊಸ ರೂಲ್ಸ್

Hospital

Krishnaveni K

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (10:06 IST)
ಬೆಂಗಳೂರು: ಕೋಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಟ್ರೈನಿ ವೈದ್ಯೆಯ ರೇಪ್ ಆಂಡ್ ಮರ್ಡರ್ ಕೇಸ್ ನ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈಗ ಕರ್ನಾಟಕದ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಯ ಮಾಡುವ ಮಹಿಳಾ ವೈದ್ಯರಿಗೆ ಹೊಸ ನಿಯಮ ಜಾರಿಗೊಳಿಸಿದೆ.

ಕರ್ನಾಟಕ ಸರ್ಕಾರವು ರಾತ್ರಿ ಪಾಳಯ ಮಾಡುವ ಮಹಿಳಾ ವೈದ್ಯರ ಜೊತೆ ಒಬ್ಬ ಮಹಿಳಾ ಪ್ಯಾರಾ ಮೆಡಿಕಲ್, ಶುಶ್ರೂಷಕಿ ಅಥವಾ ಡಿ ಗ್ರೂಪ್ ನೌಕರರನ್ನು ನಿಯೋಜನೆಗೊಳಿಸುವುದು ಕಡ್ಡಾಯವಾಗಿದೆ. ಆರೋಗ್ಯ ಇಲಾಖೆ ಹೊಸ ನಿಯಮಗಳ ಸುತ್ತೋಲೆಯನ್ನು ಹೊರಡಿಸಿದೆ.

ಕೋಲ್ಕತ್ತಾ ವೈದ್ಯೆಯ ಪ್ರಕರಣದ ಬಳಿಕ ನಮ್ಮ ರಾಜ್ಯದಲ್ಲೂ ಟ್ರೈನಿ ವೈದ್ಯೆಯರ ಸಂಕಷ್ಟಗಳ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದವು. ಇಲ್ಲೂ ಅವಧಿ ಮೀರಿ ದುಡಿಸಲಾಗುತ್ತಿದೆ ಎಂದೆಲ್ಲಾ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ರಾಜ್ಯದಲ್ಲೂ ವೈದ್ಯೆಯರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದರು.

ಅದರಂತೆ ಈಗ ಹೊಸ ನಿಯಮ ಜಾರಿಗೆ ತರಲಾಗಿದೆ. ಕೇವಲ ಸರ್ಕಾರೀ ಆಸ್ಪತ್ರೆಗಳು ಮಾತ್ರವಲ್ಲ, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿಗೂ ಈ ನಿಯಮ ಅನ್ವಯವಾಗಲಿದೆ. ಐಸಿಯುವಿಗೆ ಭೇಟಿ ನೀಡುವ ಸಾರ್ವಜನಿಕರ, ರೋಗಿಗಳ ಸಂಬಂಧಿಗಳಿಗೆ ಕಡ್ಡಾಯ ಗುರುತಿನ ಚೀಟಿ, ರಾತ್ರಿ 12 ರಿಂದ ಮುಂಜಾನೆ 4 ಗಂಟೆಯವರೆಗೆ ಪೊಲೀಸರಿಂದ ಗಸ್ತು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಆಸ್ಪತ್ರೆಗಳಿಗೆ ಸಿಬ್ಬಂದಿ ನಿಯೋಜಿಸುವ ಕುರಿತು ಸುತ್ತೋಲೆಯಲ್ಲಿ ಆದೇಶ ಹೊರಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಕೇಸ್ ನಲ್ಲಿ ರಾಜ್ಯಪಾಲರ ಪರವಾಗಿ ತೀರ್ಪು ಬಂದರೆ ಸಿಎಂ ಸಿದ್ದರಾಮಯ್ಯ ಭವಿಷ್ಯ ಏನಾಗಬಹುದು