Publish Date: Tue, 18 Jan 2022 (15:23 IST)
Updated Date: Tue, 18 Jan 2022 (15:47 IST)
ಬೆಂಗಳೂರಿನಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕಿ 78 ದಿನಗಳ ಬಳಿಕ ಗುಜರಾತ್‌ನ ಸೂರತ್‌ನಲ್ಲಿ ಪತ್ತೆಯಾಗಿದ್ದಾಳೆ. ಯುವತಿ ಮಾಟ ಮಂತ್ರದ ಆಕರ್ಷಣೆಗೆ ಒಳಗಾಗಿ ನಾಪತ್ತೆಯಾಗಿದ್ದಾಳೆ ಎಂದು ಶಂಕಿಸಲಾಗಿತ್ತು.
ಅಕ್ಟೋಬರ್ 31 ರಂದು ಅನುಷ್ಕಾ (17) ಬೆಂಗಳೂರಿನಿಂದ ನಾಪತ್ತೆಯಾಗಿದ್ದಳು.
ಸಾಮಾಜಿಕ ಜಾಲತಾಣದ ಮೂಲಕ ಪುತ್ರಿಗಾಗಿ ಅಭಿಷೇಕ್ ಮತ್ತು ಅರ್ಚನಾ ದಂಪತಿ ಹುಡುಕಾಟ ನಡೆಸುತ್ತಿದ್ದರು. ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲು ಮಾಡಲಾಗಿತ್ತು.
ಗುಜರಾತ್ ರಾಜ್ಯದ ಸೂರತ್‌ನ ಅನಾಥಶ್ರಮದಲ್ಲಿ ಅನುಷ್ಠಾ ಪತ್ತೆಯಾಗಿದ್ದಾಳೆ. ಬೆಂಗಳೂರು ಪೊಲೀಸರ ವಶಕ್ಕೆ ಆಕೆಯನ್ನು ನೀಡಲಾಗಿದ್ದು, ಪೊಲೀಸರು ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ.
Shamanism (ಆತ್ಮಗಳ ಜೊತೆ ಸಂಭಾಷಣೆ) ಮಾದರಿಯನ್ನು ಕಲಿಯಲು ಅನುಷ್ಕಾ ಬಯಸಿದ್ದಳು. ಆದರೆ ಪೋಷಕರು ಮನೆಯಲ್ಲಿಯೇ ಕಲಿಯುವಂತೆ ಹೇಳಿದ್ದರು. ಆದರೆ ಅಕ್ಟೋಬರ್ 31ರಂದು ಅನುಷ್ಕಾ ಮನೆಯಿಂದ ನಾಪತ್ತೆಯಾಗಿದ್ದಳು. ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.