Select Your Language

Notifications

webdunia
webdunia
webdunia
webdunia

ಲಾಕ್‌ ಡೌನ್‌: ವಾಹನ ಮಾಲೀಕರಿಂದ ಲಕ್ಷ ಲಕ್ಷ ದಂಡ ವಸೂಲಿ

ಲಾಕ್‌ ಡೌನ್‌: ವಾಹನ ಮಾಲೀಕರಿಂದ ಲಕ್ಷ ಲಕ್ಷ ದಂಡ ವಸೂಲಿ
ಹಾವೇರಿ , ಭಾನುವಾರ, 29 ಮಾರ್ಚ್ 2020 (18:01 IST)
ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದರೂ ಅನಗತ್ಯವಾಗಿ ಓಡಾಡುತ್ತಿರುವವರ ವಿರುದ್ಧ ಕೇಸ್ ಹಾಕಲಾಗುತ್ತಿದೆ. ಬೈಕ್ ಸವಾರರಿಂದ ಲಕ್ಷ ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಪೊಲೀಸರ ಕಣ್ತಪ್ಪಿಸಿ ಅನಗತ್ಯವಾಗಿ ಕೆಲವು ವಾಹನ ಸವಾರರು ತಿರುಗುತ್ತಿದ್ದಾರೆ. ಇಂಥ ವಾಹನ ಸವಾರರ ವಿರುದ್ಧ ಪೊಲೀಸರು ಎರಡು ದಿನಗಳಲ್ಲಿ 223 ಪ್ರಕರಣಗಳನ್ನು ದಾಖಲಿಸಿ, ಬರೋಬ್ಬರಿ 1,18,300 ದಂಡ ವಿಧಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆ ಇದ್ದರೂ ಅತ್ಯಗತ್ಯ ವಸ್ತುಗಳಾದ ತರಕಾರಿ, ದಿನಸಿ, ಹಾಲು, ಔಷಧ ಖರೀದಿಸಲು ಸಾರ್ವಜನಿಕರು ನಿಗದಿತ ವೇಳೆಯಲ್ಲಿ ಹೊರಬರಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಕೆಲವರು ಅನಗತ್ಯವಾಗಿ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ. ಇಂಥವರನ್ನು ಪೊಲೀಸರು ತಡೆದು ಲಾಠಿ ರುಚಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ದಂಡ ವಸೂಲಿ ಮಾಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರನ್ನು ಝಾಡಿಸಿದ ಡಿಸಿ : ನನ್ನನ್ನು ಯಾರೂ ಪ್ರಶ್ನೆ ಮಾಡಬಾರ್ದು ಎಂದ ಎಂಎಲ್ಎ