Select Your Language

Notifications

webdunia
webdunia
webdunia
webdunia

ಬಿಎಸ್‌ವೈಗೆ ಬುದ್ದಿ ಹೇಳುವಷ್ಟು ಕುಮಾರಸ್ವಾಮಿ ದೊಡ್ಡವರಲ್ಲ: ಶ್ರೀರಾಮುಲು

ಬಿಎಸ್‌ವೈಗೆ ಬುದ್ದಿ ಹೇಳುವಷ್ಟು ಕುಮಾರಸ್ವಾಮಿ ದೊಡ್ಡವರಲ್ಲ: ಶ್ರೀರಾಮುಲು
ಕೊಪ್ಪಳ , ಶನಿವಾರ, 2 ಜೂನ್ 2018 (17:56 IST)
ಯಡಿಯೂರಪ್ಪನಿಗೆ ಬುದ್ದಿ ಹೇಳುವಷ್ಟು  ಮುಖ್ಯಮಂತ್ರಿ ಕುಮಾರ ಸ್ವಾಮಿ ದೊಡ್ಡವರಲ್ಲ ಎಂದು ವಿವಾದಾತ್ಮಕ ಹೇಳಿಕೆಯನ್ನು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ತಮ್ಮ ಮಾತಿನ ದಾಟಿಯನ್ನು ಬದಲಿಸಿದ  ಶ್ರೀರಾಮುಲು ಮುಖ್ಯ ಮಂತ್ರಿಯಾಗಿದ್ದು ಅವರಿಗೆ ಗೌರವ ಕೋಡುತ್ತೇನೆ ಅವರು ರೈತರ ಸಾಲ ಮನ್ನಾ ಮಾಡಬೇಕು ಸಾಲಮನ್ನಾಕ್ಕೆ ಡೆಡ್ ಲೈನ್ ನಿಗಧಿ ಮಾಡಬೇಕು ಎಂದು ಹೇಳಿಕೆ ನೀಡಿದರು. 
 
ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ ವಿಚಾರ. ಕಾಂಗ್ರೆಸ್ ನವರಿಗೆ ಇವತ್ತು ಹೊಟ್ಟೆ ನೋವು ಬಂದಿದೆ. ಯುಪಿಎ ಸರ್ಕಾರ ಇದ್ದಾಗಲೂ ಬಿಜೆಪಿ ನಾಯಕರ ಮೇಲೆ ದಾಳಿ ನಡೆದಿತ್ತು.ಅವಾಗ ಕಾನೂನು ಮಾತನಾಡೋರು ಇವಾಗ ಯಾಕೆ ಮಾತು ಬದಲಾಗಿದೆ ಎಂದು ತಿರುಗೇಟು ನೀಡಿದರು.
 
ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಡಿಕೆ ಶಿವಕುಮಾರ್ ಒಬ್ಬ ದೊಡ್ಡಮನುಷ್ಯನಾ..?ಕಾನೂನುಕ್ಕಿಂತ ಅವರೇನು ದೊಡ್ಡವರಾ..? ಕಾನೂನು ಅದರ ಕೆಲಸ ಮಾಡ್ತಾ ಇದೆ. ಯಾರೋ ಮೇಲೆ ದಾಳಿ ಮಾಡಿದ್ರೆ, ಕುಂಬಳಕಾಯಿ ಕಳ್ಳನ ತರಹ ಡಿಕಿಶಿ ಯಾಕೆ ಮಾಡಿಕೊಳ್ತಾರೆ. ಅವರು ತಪ್ಪು ಮಾಡಿದ್ದಾರೆ. ಅದಕ್ಕೆ ಮೊದಲು ಬಂದು ಪ್ರೆಸ್ಮಮಿಟ್ ಮಾಡ್ತಾರೆ ಎಂದು ಟಾಂಗ್ ನೀಡಿದರು.
 
ಕಾಂಗ್ರೆಸ್-ಜೆಡಿಎಸ್ ಲೋಕಸಭೆಯಲ್ಲಿ ಮೈತ್ರಿಕೊಳ್ಳಲಿ. ನಮಗೆ ಏನು ಸಮಸ್ಯೆ ಆಗಲ್ಲ.ಮೋದಿಯವರೇ ಅಧಿಕಾರಕ್ಕೆ ಬರ್ತಾರೆ.ಉಪಚುನಾವಣೆ ಬಿಜೆಪಿಗೆ ಯಾವುದೇ ದಿಕ್ಸೂಚಿ ಆಗಲ್ಲ.ಉಪಚುನಾವಣೆಯಿಂದ ಬಿಜೆಪಿಗೆ ಏನು ಆಗಲ್ಲ.2019 ರಲ್ಲಿಯೂ ಸಹ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಮಂತ್ರಿಯಾಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ತೃತೀಯರಂಗ , ಸಮೀಶ್ರಸರ್ಕಾರದಲ್ಲಿ ಅವಕಾಶವಾದಿಗಳು ಇರ್ತಾರೆ..ಸಣ್ಣ ಪುಟ್ಟ ವ್ಯತ್ಯಾಸ ಇದ್ರೆ ಅಲ್ಲಿ ಇರುವವರು ಬೇರೆ ಕಡೆ ಜಂಪ್ ಹಾಗ್ತಾರೆ..ಆದ್ದರಿಂದ ತೃತೀಯರಂಗ ಮೋದಿಯನ್ನು ಏನು ಮಾಡೋಕೆ ಆಗಲ್ಲ ಎಂದು ಗುಡುಗಿದರು.
 
ಸಿಎಂ ಕುಮಾರಸ್ವಾಮಿ ರೈತರನ್ನು ಕರೆದ್ರೂ ನಾಟಕ ಮಾಡೋದು ಬೇಡ.ಮೊದಲು ಸಾಲಮನ್ನಾ ಮಾಡಿ ಮಾತು ಉಳಿಸಿಕೊಳ್ಳಿ.
ನಮ್ಮ‌ ಸರ್ಕಾರ ಇದ್ದಿದ್ರೆ ನಾವು ಎಲ್ಲಾ ತರಹದ ಸಾಲ ಮನ್ನಾ ಮಾಡ್ತಾ ಇದ್ದೇವು. ಆದ್ರೆ ನಮ್ಮ‌ ಸರ್ಕಾರ ರಾಜ್ಯದಲ್ಲಿ ಇಲ್ಲ ಎಂದು ನುಣುಚಿಕೊಂಡ ರಾಮುಲು.ಇತಿಹಾಸದಲ್ಲಿ ಸಮ್ಮಿಶ್ರ ಸರಕಾರಗಳು ಅವಧಿಯನ್ನು ಪೂರ್ಣಗೊಳಿಸಿಲ್ಲ. ಇದಕ್ಕೆ ಆಯುಷ್ಯ ಇಲ್ಲ ಎಂದು ಶಾಸಕ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀನಿವಾಸ್‌ಗೆ ಸಚಿವ ಸ್ಥಾನ: ದೇವೇಗೌಡರ ಕಾರಿಗೆ ಘೇರಾವ್