Select Your Language

Notifications

webdunia
webdunia
webdunia
webdunia

ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮತದಾರರಿಗೆ ಆಮಿಷ: ಐವನ್ ಡಿಸೋಜಾ

ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮತದಾರರಿಗೆ ಆಮಿಷ: ಐವನ್ ಡಿಸೋಜಾ
ಉಡುಪಿ , ಶನಿವಾರ, 2 ಜೂನ್ 2018 (17:37 IST)
ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮತದಾರರಿಗೆ ಆಮಿಷ ಒಡ್ಡಿ ಮತಪಡೆಯುವ ಕುತಂತ್ರವನ್ನು ನಡೆಸುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. 
ಅವರು ಇಂದು ಉಡುಪಿಯಲ್ಲಿ ಈ ವಿಚಾರವಾಗಿ  ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಹಾಗೂ ಪದವೀದರರ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಪಕ್ಷದಿಂದ ಪದವೀಧರರ ಕ್ಷೇತ್ರದಲ್ಲಿ ಎಸ್ .ಪಿ ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಕೆ .ಕೆ ಮಂಜುನಾಥ್ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. 
 
 ಚುನಾವಣೆ ಪ್ರಚಾರಗಳನ್ನು ಕಾಂಗ್ರೆಸ್ ಸಕ್ರಿಯವಾಗಿ ಮಾಡುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಣ್ಣ ಅಂತರದ ಮತಗಳಲ್ಲಿ ಸೋಲು ಕಂಡಿದೆ. ಆದ್ರೆ ಈ ಬಾರಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಶಿಕ್ಷಕರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚಿನ ಒತ್ತು ನೀಡಿದೆ.
 
ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಕೂಡಾ ಕಾಂಗ್ರೆಸ್ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಕಳೆದ 5 ವರ್ಷಗಳಲ್ಲಿ ಸಿದ್ದ ರಾಮಯ್ಯ ಸರಕಾರ ಶಿಕ್ಷಕರ ಪರವಾಗಿ ಕೆಲಸ ಮಾಡಿದೆ. ಆದ್ರೆ ಬಿಜೆಪಿ ಆಡಳಿತದಲ್ಲಿ ಇದ್ದಾಗ ಹಾಗೂ ಇಲ್ಲದಾಗಲೂ ಶಿಕ್ಷಕರ ಪರ  ಕೆಲಸ ಮಾಡಿಲ್ಲ. ಕೇಂದ್ರದಲ್ಲಿ ಮೋದಿ ಸರಕಾರ ಸರಕಾರ ಆಡಳಿತದಲ್ಲಿದೆ.
 
ಚುನಾವಣೆ ಸಂದರ್ಭ 8 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಜನರಿಗೆ ಭರವಸೆ ನೀಡಿ ಅಧಿಕಾರ ಹಿಡಿದಿತ್ತು.ಆದ್ರೆ ತನ್ನನಾಲ್ಕು ವರ್ಷಗಳ ಅವಧಯಲ್ಲಿ ಬರೇ 3.5ಕಲ್ಷ ಉದ್ಯೋಗ ಸೃಷ್ಟಿ ಮಾಡಿದೆ. ಅದೇ ಕರ್ನಾಟಕದಲ್ಲಿದ್ದ ಮಾಜಿ ಸಿ ಎಂ ಸಿದ್ದರಾಮಯ್ಯ ಸರಕಾರ ತನ್ನ ಐದು ವರ್ಷಗಳ ಆಡಳಿತದಲ್ಲಿ 4.5 ಲಕ್ಷ ಉದ್ಯೋಗ ಸೃಷ್ಟಿಮಾಡುವ ಮೂಲಕ ರಾಜ್ಯದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿ ಮಾಡಿದೆ ಎಂದರು. 
 
ಬಿಜೆಪಿ ಕೇವಲ ಬೊಗಳೆ ಬಿಡುತ್ತೇ ವಿನಃ ಕಾಯಕದಲ್ಲಿ ಏನು ಮಾಡಿ ತೋರಿಸುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಹಾಗೂ ಜೆಡಿಎಸ್ ಶಿಕ್ಷಕರ ಹಾಗೂ ಪದವೀಧರರ ಪರ ಇರುವ ಸರಕಾರ ಎಂದು ಬೊಗಳೆ ಬಿಡುತ್ತೇ ಎಂದು ಲೇವಡಿ ಮಾಡಿದರು.
 
ಈಗಾಗಲೇ ಈ ಎರಡು ಪಕ್ಷಗಳು ಮತದಾರರಿಗೆ ಹಣ ಹಾಗೂ ಉಡುಗೊರೆಯ ಅಮೀಷ ಒಡ್ಡಿ ಮತವನ್ನು ಪಡೆಯುವ ಕುತಂತ್ರ ನಡೆಸುತ್ತಿರುವ ಮಾಹಿತಿ ನನ್ನ ಗಮನಕ್ಕೆಬಂದಿದೆ. ಈ ವಿಚಾರವಾಗಿ ಚುನಾವಣೆ ಆಯೋಗಕ್ಕೆ ದೂರು ನೀಡುವುದಾಗಿ ಐವಾನ್ ಡಿಸೋಜ ಎಚ್ಚರಿಕೆಯನ್ನು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರೇ ತಿಂಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ: ಶಾಸಕ ಚರಂತಿಮಠ್