Select Your Language

Notifications

webdunia
webdunia
webdunia
webdunia

ಮೂರೇ ತಿಂಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ: ಶಾಸಕ ಚರಂತಿಮಠ್

ಮೂರೇ ತಿಂಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ: ಶಾಸಕ ಚರಂತಿಮಠ್
ಬಾಗಲಕೋಟೆ , ಶನಿವಾರ, 2 ಜೂನ್ 2018 (17:36 IST)
ರಾಜ್ಯದಲ್ಲಿ ರಚನೆಯಾಗಿರುವ ಸಮ್ಮಿಶ್ರ ಸರಕಾರ ಪೂರ್ವ ಕ್ಕೆ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಮೂರು ತಿಂಗಳ ಕಡಿಮೆ ಆರು ತಿಂಗಳ ಹೆಚ್ಚು ಎನ್ನುವಷ್ಟರಲ್ಲಿ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು  ಬಾಗಲಕೋಟೆಯಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠ ಸಂವಾದದಲ್ಲಿ ಹೇಳಿದರು.
ಬಾಗಲಕೋಟೆ ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, ಸಚಿವ ಸಂಪುಟ ರಚನೆಯಾಗುವಷ್ಟರಲ್ಲಿ ಕೆಲವೊಂದು ಬದಲಾವಣೆಯಾಗಿ ಬಿಜೆಪಿ ಸರಕಾರ ರಚನೆಗೆ ಪೂರಕವಾಗುತ್ತೆ. ಈಗಾಗಲೇ ಬಿಜೆಪಿ ರಣತಂತ್ರ ರೂಪಿಸಿದೆ ಎಂದರು. 
 
ಬಾಗಲಕೋಟೆ ಮತಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ನಡೆದ ಕಾಮಗಾರಿಗಳ ಅವ್ಯವಹಾರ ತನಿಖೆ ನಡೆಸಲಾಗುವದು. ಜೊತೆಗೆ ಆಲಮಟ್ಟಿ ಆಣೆಕಟ್ಟಿನ 522 ಮೀಟರ್ ಎತ್ತರಿಸುವ ಸಂಬಂಧ ಜಾಗ ಸ್ಥಳಾಂತರಕ್ಕೆ ಬದ್ಧನಾಗಿದ್ದು, ತಹಶೀಲ್ದಾರ ಕಚೇರಿಯಲ್ಲಿನ ಭ್ರಷ್ಟಾಚಾರ ಮಿತಿಮೀರಿದೆ ಅದಕ್ಕೆ ಕಡಿವಾಣ ಹಾಕಲಾಗುವದು ಎಂದು ತಿಳಿಸಿದ್ದಾರೆ. 
 
ನಗರಸಭೆ,  ಬಿಟಿಡಿಎ ಅಡಿಯಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲಿನ ಭ್ರಷ್ಟಾಚಾರ ತೊಡೆದು, ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ. ಇನ್ನು ಪುನರ್ವಸತಿ ಕೇಂದ್ರ ಹಾಗೂ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಲಾಗುವುದು. ಮತಕ್ಷೇತ್ರದಲ್ಲಿ ಉದ್ಯೋಗ  ಸೃಷ್ಟಿಸಲಾಗುವದು. ಜೊತೆಗೆ ನಗರದಲ್ಲಿ 24 ಗಂಟೆಗಳ ಕಾಲ ನೀರಿನ ಸೌಲಭ್ಯ ಒದಗಿಸಲು ಆದ್ಯತೆ ನೀಡುವುದರೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡ್ತೇನೆ  ಎಂದು ಶಾಸಕ ಚರಂತಿಮಠ್ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ .ವಿ. ದೇಶಪಾಂಡೆ ಬಿಜೆಪಿಗೆ ಬರಲಿ: ಅನಂತಕುಮಾರ್