Publish Date: Sat, 02 Jun 2018 (13:13 IST)
Updated Date: Sat, 02 Jun 2018 (13:16 IST)
ಬೆಂಗಳೂರು: ಜೆಡಿಎಸ್ ನಲ್ಲೂ ಇದೀಗ ಖಾತೆ ಹಂಚಿಕೆ ವಿಚಾರವಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಸಿದ್ದರಾಮಯ್ಯ ಅವರಿಗೇ ಸೋಲುಣಿಸಿದ ಜಿಡಿ ದೇವೇಗೌಡ ಇದೀಗ ಲೋಕೋಪಯೋಗಿ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ.
ಈ ಮೊದಲು ಜಿಡಿ ದೇವೇಗೌಡ ಕಂದಾಯ ಅಥವಾ ನೀರಾವರಿ ಇಲಾಖೆ ನೀಡುವಂತೆ ಕೇಳಿದ್ದರು. ಆದರೆ ಇವೆರಡೂ ಕಾಂಗ್ರೆಸ್ ಪಾಲಾಗಿವೆ. ಹೀಗಾಗಿ ಇದೀಗ ಲೋಕೋಪಯೋಗಿ ಇಲಾಖೆ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
ಆದರೆ ಲೋಕೋಪಯೋಗಿ ಖಾತೆಗಾಗಿ ಈಗಾಗಲೇ ಎಚ್ ಡಿ ರೇವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡರಿಗೇ ಜಿಟಿ ದೇವೇಗೌಡ ಲೋಕೋಪಯೋಗಿ ಇಲಾಖೆ ನೀಡಿ. ಸಹಕಾರ ಖಾತೆ ನಿಭಾಯಿಸುವ ಆಸಕ್ತಿ ಇಲ್ಲ ಎಂದು ಸಂದೇಶ ನೀಡಿದ್ದಾರಂತೆ. ಹೀಗಾಗಿ ಖಾತೆ ಹಂಚಿಕೆ ಕಗ್ಗಂಟಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.