Publish Date: Sat, 02 Jun 2018 (09:29 IST)
Updated Date: Sat, 02 Jun 2018 (09:30 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ತಲೆನೋವು ಶಮನವಾಗಿದ್ದು, ಇದೀಗ ಪ್ರಮುಖ ನಾಯಕರು ತಮ್ಮ ಪಕ್ಷದ ನಾಯಕರಿಗೆ ಪ್ರಮುಖ ಖಾತೆಗಳಿಗಾಗಿ ಡಿಮ್ಯಾಂಡ್ ಮಾಡಲು ಶುರು ಮಾಡಿದ್ದಾರೆ.
ನಿನ್ನೆ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲಿ ಕಾಂಗ್ರೆಸ್ ನಾಯಕರು ಜತೆಗೂಡಿ ಸಭೆ ನಡೆಸಿದ್ದು, ಸಂಪುಟ ವಿಸ್ತರಣೆ ಸಂಕಟ ಬಗೆಹರಿಸಿದ್ದಾರೆ. ಹಣಕಾಸು, ನೀರಾವರಿ ಸೇರಿದಂತೆ ಪ್ರಮುಖ ಖಾತೆಗಳು ಜೆಡಿಎಸ್ ಪಾಲಾಗಿದೆ.
ಆದರೆ ಇದೀಗ ಆಕಾಂಕ್ಷಿಗಳ ದಂಡು ತಮ್ಮ ತಮ್ಮ ಪಕ್ಷದ ನಾಯಕರ ಹಿಂದೆ ಬಿದ್ದಿದೆ. ಡಿಕೆ ಶಿವಕುಮಾರ್, ಶ್ಯಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದಾರೆ. ಇತ್ತ ಜೆಡಿಎಸ್ ನಲ್ಲೂ ಎಚ್ ಡಿ ರೇವಣ್ಣ ಗೃಹ ಖಾತೆ ಮೇಲೆಯೇ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಮುಂದಿನ ವಾರ ಯಾರಿಗೆ ಯಾವ ಖಾತೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.