Publish Date: Sat, 02 Jun 2018 (17:53 IST)
Updated Date: Sat, 02 Jun 2018 (17:55 IST)
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ವರಿಷ್ಛ ಎಚ್.ಡಿ.ದೇವೇಗೌಡರ ಕಾರಿಗೆ ಶ್ರೀನಿವಾಸ ಪರ ಬೆಂಬಲಿಗರು ಘೇರಾವ್ ಹಾಕಿದ ಘಟನೆ ವರದಿಯಾಗಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪರ ತುಮಕೂರು ನಗರದ ಕೊಲ್ಲಾಪುರದಮ್ಮ ಸಮುದಾಯ ಭನದಲ್ಲಿ ನಡೆಯುತ್ತಿದ್ದ ಪ್ರಚಾರ ಸಭೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಜೆ ಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ದೇವೆಗೌಡರ ಕಾರಿಗೆ ಅಡ್ಡಹಾಕಿ ಒತ್ತಾಯಿಸಲಾಯಿತು.
ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಘೋಷಣೆ ಕೂಗಿ ಒತ್ತಾಯಿಸಿದ್ದಲ್ಲದೇ ಕಾರಿಗೆ ಅಡ್ಡ ನಿಂತು ಪ್ರತಿಭಟನೆ ಮಾಡಲು ಬೆಂಬಲಿಗರು ಯತ್ನಿಸಿದಾಗ ಜೆಡಿಎಸ್ ಕಾರ್ಯಕರ್ತರ ನಡೆಯಿಂದ ದೇವೇಗೌಡರು ಮುಜುಗರಕ್ಕಿಡಾದರು ಎಂದು ಮೂಲಗಳು ತಿಳಿಸಿವೆ.
ವಿಚಲಿತರಾಗದೇ ಮುಂದೆ ನಡೆದ ದೇವೇಗೌಡರು, ಪ್ರತಿಭಟನಾ ನಿರತ ಬೆಂಬಲಿಗರನ್ನ ಪೋಲಿಸರು ತೆರವುಗೊಳಿಸಿದ ನಂತರ ಬೆಂಗಳೂರಿಗೆ ಮರಳಿದರು ಎನ್ನಲಾಗಿದೆ