Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರಾಕಿದ್ರು- ದೇವೇಗೌಡ ವಾಗ್ದಾಳಿ

ಬೆಂಗಳೂರು
ಬೆಂಗಳೂರು : ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರಾಕಿದ್ರು ಮತ್ತೆ ಕಾಂಗ್ರೆಸ್ ವಿರುದ್ಧ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.




ಈಗಾಗಲೇ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ, ಸಮ್ಮಿಶ್ರ ಸರ್ಕಾರ ಪತನಕ್ಕೆ ಹೆಚ್.ಡಿ. ಕುಮಾರಸ್ವಾಮಿ ರೇವಣ್ಣ, ದೇವೇಗೌಡರೇ ಕಾರಣ  ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು,  ಕಾಂಗ್ರೆಸ್ ನವರ ಹಿಂಸೆಗೆ ತಾಳಲಾರದೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತೀನಿ ಎಂದು ನನ್ನ ಬಳಿ ಬಂದಿದ್ರು. ಸರ್ಕಾರ ಬೀಳಿಸಿದ್ರೆ ನಮ್ಮ ಮೇಲೆ ಆರೋಪ ಮಾಡ್ತಾರೆಂದು ಸುಮ್ಮನಿದ್ದೆ. ಸರ್ಕಾರ ಹೋದ ಮೇಲೆ ಇದನೆಲ್ಲವನ್ನೂ ಅದಕ್ಕೆ ಹೇಳ್ತಿದ್ದೀನಿ ಎಂದು ಹೇಳಿದ್ದಾರೆ.


ಕಾಂಗ್ರೆಸ್ ಕೊಟ್ಟ ನೋವು ನಿತ್ಯ ಸಹಿಸಿಕೊಂಡು ಊಟ ಮಾಡ್ತಿದ್ದೆ. ನಾನೇ ಸರ್ಕಾರ ತೆಗೆದಿದ್ರೆ ದೇವೇಗೌಡರೇ ಸರ್ಕಾರ ಬೀಳಿಸಿದ್ರು ಅಂತಿದ್ರು. ಪ್ರಾದೇಶಿಕ ಪಕ್ಷವಾಗಿ ನಾವೇ ಹೊರ ಬಂದಿದ್ರೆ ದೇಶದಲ್ಲಿ ತಪ್ಪು ಸಂದೇಶ ಹೋಗುತ್ತೆ. ಹೀಗಾಗಿ ನಾನೇ ಕುಮಾರಸ್ವಾಮಿಗೆ ಸಹಿಸಿಕೊಂಡು ಹೋಗು ಅಂತ ಹೇಳಿದ್ದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಅತೀಯಾದ ಪ್ರೀತಿ ಸಹಿಸಲಾರದೇ ಕೋರ್ಟ್ ಮೊರೆ ಹೋದ ಹೆಂಡತಿ!