Select Your Language

Notifications

webdunia
webdunia
webdunia
webdunia

ಕುಮಾರ ವಿಜಯ ಸಮರವ್ಯೂಹ...... ಕೈ ಸರ್ಕಾರಕ್ಕೆ ಗ್ಯಾರಂಟಿ ಸವಾಲ್

ಕುಮಾರ ವಿಜಯ ಸಮರವ್ಯೂಹ...... ಕೈ ಸರ್ಕಾರಕ್ಕೆ ಗ್ಯಾರಂಟಿ ಸವಾಲ್
bangalore , ಮಂಗಳವಾರ, 28 ನವೆಂಬರ್ 2023 (15:00 IST)
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ೨೦೨೪ರ ಲೋಕಸಮರಕ್ಕೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿವೆ. ಆದರೆ ಸೀಟು ಹಂಚಿಕೆಯ ಮಾತುಕತೆಯನ್ನು ಬಿಟ್ಟು, ಇನ್ನೂಳಿದ ಮೈತ್ರಿಯ ಕಾರ್ಯತಂತ್ರಗಳ ಬಗ್ಗೆ ಈಗಾಗಲೇ ಬಿಜೆಪಿಯ ಡೆಲ್ಲಿಯ ವರಿಷ್ಠರ ಬಳಿ ಒಂದಷ್ಟು ಮಾತುಕತೆಗಳು ನಡೆದಿವೆ ಎಂಬುದು ಸ್ಪಷ್ಟವಾಗಿದೆ.
 
ಕಾಂಗ್ರೆಸ್‌ಗೆ ೧೩೫ ಸ್ಥಾನಗಳ ಪ್ರಚಂಡ ದಿಗ್ವಿಜಯ ಗಳಿಸಿರೋದೇ ೨೦೨೪ರ ಸಮರವನ್ನು ದಿಟ್ಟವಾಗಿ ಎದುರಿಸಲು ಆತ್ಮವಿಶ್ವಾಸ ಬಂದಿದೆ. ಆದರೂ ಪಕ್ಷದಲ್ಲಿನ ಒಂದಷ್ಟು ಗೊಂದಲಗಳು, ಆತಂರಿಕ ರಂಪಾಟಗಳು ಚುನಾವಣೆಯ ಹೊತ್ತಿಗೆ ಒಂದಷ್ಟು ಪರಿಣಾಮಗಳನ್ನು ಬೀರುವಂತೆ ಮಾಡಬಹುದು. 
 
ಇಲ್ಲಿಯ ತನಕ ಅಂದರೇ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳ ಅವಧಿಯವರೆಗೂ, ಬಿಜೆಪಿ ಮತ್ತು ಜೆಡಿಎಸ್‌ನಿಂದ ಆಡಳಿತ ಪಕ್ಷ ಕಾಂಗ್ರೆಸ್‌ನ ಮೇಲೆ ಯಾವುದೇ ಒತ್ತಡ ಬಂದಿರಿಲ್ಲ. ಯಾಕಂದರೇ ವಿರೋಧಪಕ್ಷಗಳ ಕೂಟದಲ್ಲಿ ವಿಪಕ್ಷ ನಾಯಕನ ಆಯ್ಕೆಗೆ ಅಂತಾನೆ ಕಸರತ್ತು ನಡೆದು ಹೋಗಿತ್ತು. ಅವರಾ, ಇವರಾ..? ಅನ್ನೋದೆ ಈ ಕಡೆಗೆ ಕಾಂಗ್ರೆಸ್‌ನ ಕಿವಿ ಹಿಂಡುವ ಪ್ರಮೇಯ ಉದ್ಭವವಾರಲಿಲ್ಲ.
 
ಆದರೆ ಇದೀಗ ಬಿಜೆಪಿಯಿಂದ ಅಧಿಕೃತವಾಗಿ ವಿಪಕ್ಷ ನಾಯಕನ ಆಯ್ಕೆ ನಡೆದಿದೆ. ಆಡಳಿತರೂಢ ಕಾಂಗ್ರೆಸ್‌ಗೇ ಪ್ರಶ್ನೆಗಳನ್ನು ಹಾಕುವ, ನೈತಿಕತೆ ವಿಪಕ್ಷ ಕೂಟಕ್ಕೆ ಬಂದಿದೆ. ಆರ್ ಅಶೋಕ್ ಎಂಬ ಮಾತಿನ ಮಲ್ಲನಿಗೆ ವಿರೋಧ ಪಕ್ಷದ ನಾಯಕನ ಪಟ್ಟ ಸಿಕ್ಕ ನಂತರ ಆ ಕಡೆಗೆ ದಳಪತಿಗಳಿಗೆ ಇವರ ಜೊತೆ ಧ್ವನಿಗೂಡಿಸಿ ಮಾತನಾಡಲು ಇನ್ನೊಂದಿಷ್ಟು ಸ್ಟಾಟರ್ಜಿಗಳು ಸಿಕ್ಕಿವೆ.... ಅಲ್ಲಿಗೆ ಚಳಿಗಾಲ ಅಧಿವೇಶನದ ಹೊತ್ತಿಗೆ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಲೋಕ ಮೈತ್ರಿ ಅಂತ ಅಖಾಡಕ್ಕೆ ಈಗಾಗಲೆ ಇಳಿದಿರುವ ಕುಮಾರ ವಿಜಯ ಟೀಮ್ ಹಲವು ಜಂಟಿ ಕಾರ್ಯತಂತ್ರಗಳನ್ನು ಹೆಣೆದಿದೆ.
 
ಬಜೆಟ್ ಅದಿವೇಶನದ ಸಂದರ್ಭದಲ್ಲಿ ಸಿದ್ದು ಸರ್ಕಾರದ ಎದುರು ನಿಂತು ಮಾತನಾಡುವ ನೈತಿಕತೆ ಬಿಜೆಪಿಗಾಗಲೀ, ಆ ಕಡೆಗೆ ೧೯ ಸೀಟ್ ಗೆದ್ದ ಕುಮಾರಣ್ಣನ ಜೆಡಿಎಸ್‌ಗಾಗಲೀ ಇರಲಿಲ್ಲ. ಕರ್ನಾಟಕದ ವಿಧಾನಸಭಾ ಹಿಸ್ಟರಿಯಲ್ಲೇ ವಿಪಕ್ಷ ನಾಯಕನಿಲ್ಲದೇ ಬಜೆಟ್ ಅಧಿವೇಶನ ನಡೆದು ಹೋಗಿತ್ತು.
 
ಆದರೆ ಇವಾಗ ಆರು ತಿಂಗಳಲ್ಲಿ ಕಾಂಗ್ರೆಸ್ ಏನ್ ಗ್ಯಾರಂಟಿ ದರ್ಭಾರ್ ನಡೆಸಿದೆ. ಅನ್ನೋದನ್ನ ಗಟ್ಟಿ ಧ್ವನಿಯಲ್ಲಿ ಕೇಳುವ, ಮಾತನಾಡುವ ಸಿದ್ಧ ಅಸ್ತç ವಿಪಕ್ಷಗಳ ಕೂಟದಲ್ಲಿ ಹುಟ್ಟಿಕೊಂಡಿದೆ. ಸೀನಿಯರ್ ಲೀಡರ್ ಆರ್ ಅಶೋಕ್ ವಿಪಕ್ಷ ನಾಯನನಾಗಿ ಕಾಂಗ್ರೆಸ್ ಸರ್ಕಾರದ ಲೋಪಗಳನ್ನು ಒಂದೋದಾಗಿ ಬೆಳಗಾವಿಯ ಅಧಿವೇಶನದಲ್ಲಿ ಎತ್ತಿ ತೋರಿಸಿ ಚಳಿ ಬಿಡಿಸುವ ಆತುರದಲ್ಲಿದ್ದಾರೆ. ಅದೇ ರೀತಿಯಾಗಿ ರಾಜ್ಯಾಧ್ಯಕ್ಷನಾಗಿರುವ ವಿಜಯೇಂದ್ರಗೂ ಪಕ್ಷವನ್ನು ಸಂಘಟಿಸುವ ಹೊಣೆಗಾರಿಗೆ ಹೇಗಲೇರಿದೆ. ಹಾಗಾಗಿ ಆ ಕಡೆಗೆ ಒಟ್ಟಿಗೆ, ನೆಟ್ಟಗೆ ಗ್ಯಾರಂಟಿ ಸರ್ಕಾರವನ್ನು ಸಂದಿಗ್ಧತೆಗೆ ಸಿಲುಕಿಸಲು ಕುಮಾರಣ್ಣ ಕೂಡ ಐಯಮ್ ರೆಡಿ ಅಂತ ಅಖಾಡದ ಕಡೆಗೆ ಮುಖ ಮಾಡಿದ್ದಾರೆ..?

ಲೋಕಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ನ ಗ್ಯಾರಂಟಿ ಅಲೆಯನ್ನು ಕುಗ್ಗಿಸಿ, ಕುಮಾರ ವ್ಯೂಹದ ತಂತ್ರದ ಮೂಲಕ ಕೈ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಜಂಟಿ ಕಾರ್ಯಚರಣೆಯನ್ನು ಮಾಡಲು ವಿಪಕ್ಷಗಳ ಕೂಟ ಸಜ್ಜಾಗಿದೆ...

ಆದರೆ ಈಗ ಕಾಂಗ್ರೆಸ್‌ನ ಗ್ಯಾರಂಟಿ ಹವಾ ಕುಗ್ಗಿಸಿ, ೨೦೨೪ರ ಲೋಕಸಮರದ ಹೊತ್ತಿಗೆ, ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡು, ಒಟ್ಟಿಗೆ ಇದ್ದೀವಿ, ಇರ್ತೀವಿ ಅನ್ನೋದನ್ನ ಫ್ರೂವ್ ಮಾಡೋದು ಕೂಡ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಕುಮಾರಣ್ಣನ ಅಜೆಂಡಾ ಇದ್ದಿರಬಹುದು..?

Share this Story:

Follow Webdunia kannada

ಮುಂದಿನ ಸುದ್ದಿ

೨೦೨೪ರ ಸಮರ ಗೆಲ್ಲಲು ರಣತಂತ್ರ ಹೆಣೆದ್ರಾ ಕುಮಾರಣ್ಣ-ವಿಜಯೇಂದ್ರ..?