Select Your Language

Notifications

webdunia
webdunia
webdunia
webdunia

೨೦೨೪ರ ಸಮರ ಗೆಲ್ಲಲು ರಣತಂತ್ರ ಹೆಣೆದ್ರಾ ಕುಮಾರಣ್ಣ-ವಿಜಯೇಂದ್ರ..?

೨೦೨೪ರ ಸಮರ ಗೆಲ್ಲಲು ರಣತಂತ್ರ ಹೆಣೆದ್ರಾ ಕುಮಾರಣ್ಣ-ವಿಜಯೇಂದ್ರ..?
bangalore , ಮಂಗಳವಾರ, 28 ನವೆಂಬರ್ 2023 (14:21 IST)
ಬಿಎಸ್‌ವೈ ಹವಾ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತರಲು ಕಾರಣವಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಅಷ್ಟು ಸ್ಥಾನಗಳು ಬರೋದಕ್ಕೆ ಕಾರಣವಾಗಿದ್ದೇ, ಇದೇ ಕುಮಾರಣ್ಣ.
 
೨೦-೨೦ ಸರ್ಕಾರ ಅಂತ ಮೈತ್ರಿ ಒಪ್ಪಂದ ಮಾಡಿಕೊಂಡ ಕುಮಾರಣ್ಣ ಮತ್ತು ಬಿಎಸ್‌ವೈ ಕಾಂಗ್ರೆಸ್‌ನ್ನು ದೂರವಿಟ್ಟು ಮೊದಲಿಗೆ ಕುಮಾರಣ್ಣ ಸಿಎಂ ಏನೋ ಆದರೂ, ಆದರೆ ಮತ್ತೆ ಬಿಎಸ್‌ವೈಗೆ ಇನ್ನೂಳಿದ ಅರ್ಧ ಅವಧಿಗೆ ಮಣ್ಣು ಹಾಕಿದರಾ ಕುಮಾರಣ್ಣ..? ಬಟ್ ನಾಟ್‌ಶ್ಯೂರ್.... 
 
ಕುಮಾರಣ್ಣ ಅವತ್ತು ಯಡಿಯೂರಪ್ಪನವರಿಗೆ ಅಧಿಕಾರ ಹಂಚಿಕೆಯಲ್ಲಿ ಮೋಸ ಮಾಡಿದರು ಅನ್ನೋದು ಬಿಎಸ್‌ವೈ ಕಣ್ಣಲ್ಲಿ ಬಂದ ಆ ನೀರೇ ಉತ್ತರಿಸಿದಂತಿತ್ತು... ಆದರೆ ಇದೇ ಸಂದರ್ಭ ಮತ್ತೆ ಬಿಎಸ್‌ವೈ ಅವರು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರಣವಾಗಿತ್ತು. ಅರೇ ಇದ್ಯಾಕೆ ಇವಾಗ ಅನ್ಕೊಂಡ್ರಾ... ಬನ್ನಿ ಯಾಕಂತಾ ಹೇಳ್ತೀವಿ..?
 
ಯೆಸ್... ಅವತ್ತು ಕುಮಾರಣ್ಣ ಮತ್ತು ಬಿಎಸ್‌ವೈ ೨೦-೨೦ ಅಂತ ಹೋಗಿ ಎಡವಟ್ಟು ಮಾಡಿಕೊಂಡು, ಕೊನೆಗೆ ಬಿಎಸ್‌ವೈ ಬಿಜೆಪಿಯಲ್ಲಿ ಟಾಪ್ ಲೀಡರ್ ಆಗಿ ಗುರ್ತಿಸಿಕೊಂಡರು.. ಆದರೆ ಇದೀಗ ಕುಮಾರಣ್ಣ ಮತ್ತು ಬಿಎಸ್‌ವೈ ಪುತ್ರ ಜೋಡೆತ್ತುಗಳಂತೆ ಸೀಕ್ರೇಟ್ ಮೀಟಿಂಗ್ ಮಾಡಿದ್ದಾರೆ.... ಹಳೆಯದ್ದೆಲ್ಲಾ ಕೆದಕ್ಕುತ್ತಾ ಹೋಗೋಕೆ ಹೋದರೆ ಇದು ರಾಜಕಾರಣ ಅನ್ನೋದನ್ನೆ ಮರೆಯಬೇಕಾಗುತ್ತೆ. ಅದೆನೋ ಹೇಳ್ತಾರಲ್ಲ ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಅಂತ....?

 ರಾಜಕಾರಣದಲ್ಲಿ ಯಾರು ಶಾಶ್ವತವಾಗಿ ಶತ್ರುಗಳು ಅಲ್ಲ, ಮಿತ್ರರು ಅಲ್ಲ. ಪಕ್ಷ ಅಧಿಕಾರ, ಜವಾಬ್ದಾರಿ ಅಂತ ಬಂದಾಗ, ಮುನಿಸಿ ಮರೆತು ಒಂದಾಗಬೇಕು.... ಯಾಕಂದರೇ ಕೇಂದ್ರದ ಬಿಜೆಪಿಯ ವರಿಷ್ಠರೇ ವಿಜಯೇಂದ್ರಗೆ ಜವಾಬ್ದಾರಿ ಅಂತ ಕೊಟ್ಟ ಮೇಲೆ ಅದನ್ನು ಕಾಯ ವಾಚಾ ಮನಸ ಅಂತ ಪಾಲಿಸಬೇಕು. ಬಹುಶಃ ವಿಜಯೇಂದ್ರ ಎಲ್ಲವನ್ನೂ ಮರೆತು, ೨೦೨೪ರಲ್ಲಿ ಈಗಾಗಲೇ ಹೇಳಿದಾಗೇ ೨೮ ಸವಾಲುಗಳನ್ನು ಮೆಟ್ಟಿ ನಿಂತು ಕುಮಾರಣ್ಣನೋ, ಇಲ್ಲ ದೇವೇಗೌಡರೋ ರಾಜಕೀಯವಾಗಿ ಒಟ್ಟಿಗೆ ಸೇರಿದಾಗ ಕಾರ್ಯತಂತ್ರಗಳನ್ನು ಮಾಡಬೇಕು ಅಲ್ಲವೇ..?
 
ಯೆಸ್.... ಜೆಡಿಎಸ್ ಮತ್ತು ಬಿಜೆಪಿಯೂ ಲೋಕಸಭಾ ಎಲೆಕ್ಷನ್‌ನ್ನು ಒಟ್ಟಿಗೆ ಸೇರಿ ಎದುರಿಸುವ ಮಾತುಕತೆ ಆಗಿದೆ. ಅರ್ಥಾತ್ ಮೈತ್ರಿ ಆಗಿದೆ. ಹೀಗಿದ್ದ ಮೇಲೆ ಕಾಂಗ್ರೆಸ್‌ನ್ನು ಈಗಿನಿಂದಲೇ ಕಟ್ಟಿ ಹಾಕುವ ರಣತಂತ್ರಗಳನ್ನು ಬಿಜೆಪಿಯಿಂದ ಅಧ್ಯಕ್ಷರಾದ ವಿಜಯೇಂದ್ರ, ಆ ಕಡೆ ಜೆಡಿಎಸ್‌ನಿಂದ ಕುಮಾರಣ್ಣ ಮಾಡಬೇಕು ಅನ್ನೋದು ಆ ಪಕ್ಷಗಳ ರೂಢಿ ನಿಯಮ..?
 
ಹೌದು... ಆ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಬಿಡದಿಯ ಕೇತಗಾನಹಳ್ಳಿಗೆ ತೆರಳಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಇಬ್ಬರು ನಾಯಕರ ಭೇಟಿ ರಾಜಕೀಯವಾಗಿ ಒಂದಷ್ಟು ಸಂಚಲನವನ್ನು ಮೂಡಿಸಿದೆ...
 
ಈ ಹಿಂದೆ ಅಂದರೇ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ಮರು ದಿನವೇ, ಜೆಡಿಎಸ್ ವರಿಷ್ಠ ದೊಡ್ಡಗೌಡರನ್ನು ಮರಿ ರಾಜಾಹುಲಿ ಮೀಟ್ ಮಾಡಿದ್ದರು. ಆದರೆ ಅವತ್ತು ಅದೊಂದು ಸಹಜ ಭೇಟಿ ಅಂತ ಅನ್ನಿಸಿದರೂ, ಕಾಂಗ್ರೆಸ್ ಪಾಳಯದಲ್ಲಿ ಒಂದಷ್ಟು ಆತಂಕ ಎದುರಾಗಿತ್ತು. ಆದರೆ ಇದೀಗ ಕುಮಾರಣ್ಣನನ್ನು ಭೇಟಿ ಮಾಡಿ ಮಾತುಕತೆ ನಡೆಸಿರೋದು ದೊಡ್ಡ ಹಾಟ್ ಟಾಪಿಕ್ ಎನ್ನಬಹುದು......?

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯಪ್ಪಾ ಸ್ವಾಮಿ ಭಕ್ತರಿಗೆ KSRTC ಇಂದ ಗುಡ್ ನ್ಯೂಸ್