Select Your Language

Notifications

webdunia
webdunia
webdunia
webdunia

ಅಯ್ಯಪ್ಪಾ ಸ್ವಾಮಿ ಭಕ್ತರಿಗೆ KSRTC ಇಂದ ಗುಡ್ ನ್ಯೂಸ್

ಅಯ್ಯಪ್ಪಾ ಸ್ವಾಮಿ ಭಕ್ತರಿಗೆ KSRTC ಇಂದ ಗುಡ್ ನ್ಯೂಸ್
bangalore , ಮಂಗಳವಾರ, 28 ನವೆಂಬರ್ 2023 (14:00 IST)
ಅಯ್ಯಪ್ಪಾ ಸ್ವಾಮಿ ಭಕ್ತರಿಗೆ  ರಾಜ್ಯ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ.ಶಬರಿಮಲೆಗೆ ಪ್ರತಿದಿನ KSRTC ವೋಲ್ವೋ ಬಸ್ ವ್ಯವಸ್ಥೆ ಮಾಡಲಾಗಿದೆ.ಕೇರಳದ ಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆಗೆ ತೆರಳುವ ಪ್ರಯಾಣಿಕರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
 
ಬೆಂಗಳೂರಿಂದ ಶಬರಿಮಲೆಗೆ ತೆರಳೋ ಭಕ್ತರಿಗೆ ವೋಲ್ವೋ ಬಸ್ ವ್ಯವಸ್ಥೆ ಮಾಡಿದ್ದು,ಡಿ. 1 ರಿಂದ ಪ್ರತಿದಿನ ಬೆಂಗಳೂರು ನಿಲಕಲ್ ನಡುವೆ ಕೆಎಸ್‌ಆರ್ಟಿಸಿ ವೋಲ್ವೋ ಬಸ್ ಸಂಚಾರ ನಡೆಸಲಿದೆ.ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 1.50ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 6:45ಕ್ಕೆ ಪಂಪಾ ತಲುಪಲಿದೆ.ಮತ್ತೊಂದು ಬಸ್ ನಿತ್ಯ ಸಂಜೆ 6 ಗಂಟೆಗೆ ಪಂಪಾದಿಂದ ಹೊರಟು ಮರುದಿನ 10 ಗಂಟೆಗೆ ಬೆಂಗಳೂರು ತಲುಪಲಿದೆ.

ಪ್ರಯಾಣಿಕರಿಗಾಗಿ ವಿಶೇಷ ಒಲ್ವೋ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ.1600 ರೂ ಟಿಕೆಟ್ ದರ ನಿಗದಿಪಡಿಸಲಾಗಿದೆ.ಕಡೆ ಎಸ್‌ ಆರ್ ಟಿಸಿ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ ಅಥವಾ ಪ್ರಮುಖ ಬಸ್ ಡಿಪೋ ಗಳಲ್ಲಿ ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದು.ಶಬರಿಮಲೆ ತೆರಳುವ ಅಯ್ಯಪ ಭಕ್ತರಿಗೆ ವಿಶೇಷ ಬಸ್ ಗಳನ್ನ ಕಲ್ಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಲಕ್ಷ್ಮೀ ಯೋಜನೆ ಹಣ ನಾಡ ದೇವತೆ ಚಾಮುಂಡೇಶ್ವರಿಗೆ ಮೊದಲು ಸಲ್ಲಿಕೆ