Daily Horoscope

Select Your Language

Notifications

webdunia
webdunia
webdunia
webdunia

ಅಧಿಕಾರ ಸ್ವೀಕರಿಸಲ್ಲ.. ಸೌಮ್ಯ ಸ್ವಭಾವದ ಕೃಷ್ಣಭೈರೇಗೌಡರದ್ದೂ ಕ್ಯಾತೆ

Krishna Bairegowda
ಬೆಂಗಳೂರು: ಡಿಕೆ ಶಿವಕುಮಾರ್ ಸಂಪುಟದಲ್ಲಿ ಖಾತೆ ಕ್ಯಾತೆ ಇನ್ನೂ ಮುಗಿದಿಲ್ಲ. ರಾಮಲಿಂಗಾರೆಡ್ಡಿ, ಮುನಿಯಪ್ಪ ವಿವಾದ ತಣ್ಣಗಾಗುತ್ತಲೇ ಈಗ ಸೌಮ್ಯ ಸ್ವಭಾವದವರೆನಿಸಿಕೊಂಡಿದ್ದ ಕೃಷ್ಣ ಭೈರೇಗೌಡ ಕೂಡಾ ಖಾತೆ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ.

ಕೃಷ್ಣಭೈರೇಗೌಡಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಇದು ಅತ್ಯಂತ ಶ್ರೀಮಂತ ಇಲಾಖೆ. ಈ ಇಲಾಖೆಗಾಗಿಯೇ ರಾಮಲಿಂಗಾ ರೆಡ್ಡಿ ಬೇಡಿಕೆಯಿಟ್ಟಿದ್ದರು. ಆದರೆ ಅವರಿಗೆ ನೀಡದೇ ಕೃಷ್ಣಭೈರೇಗೌಡ ನೀಡಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಆದರೆ ಈಗ ಕೃಷ್ಣಭೈರೇಗೌಡರೂ ತಮಗೆ ಸಿಕ್ಕ ಖಾತೆ ಬಗ್ಗೆ ಅಪಸ್ವರವೆತ್ತಿದ್ದಾರೆ. ನಗರಾಭಿವೃದ್ಧಿ ಖಾತೆ ಜೊತೆಗೆ ಬಿಡಿಎ ಮತ್ತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇಲಾಖೆಗಳನ್ನು ಸೇರಿಸಬೇಕು. ಇಲ್ಲದೇ ಹೋದರೆ ನಗರಾಭಿವೃದ್ಧಿ ಖಾತೆ ಪರಿಣಾಮಕಾರಿಯಾಗಲ್ಲ. ಈ ಬಗ್ಗೆ ಹೈಕಮಾಂಡ್ ಗೊಂದಲ ಪರಿಹಾರ ಮಾಡಬೇಕು. ಅಲ್ಲಿಯವರೆಗೂ ಖಾತೆ ಸ್ವೀಕಾರ ಮಾಡಲ್ಲ ಎಂದಿದ್ದಾರೆ.

ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಮಲಿಂಗಾ ರೆಡ್ಡಿ, ಮುನಿಯಪ್ಪ ಅಸಮಾಧಾನ ಶಮನ ಮಾಡಿದ ಬೆನ್ನಲ್ಲೇ ಈಗ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ತಲೆನೋವು ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ