Publish Date: Mon, 08 Jun 2026 (10:52 IST)
Updated Date: Mon, 08 Jun 2026 (10:54 IST)
ಬೆಂಗಳೂರು: ಒಬ್ರು ಮಾಜಿ ಪ್ರಧಾನಿ ಅವರನ್ನ ರಾಜ್ಯ ಸಭೆಗೆ ಕಳುಹಿಸೋಕೆ ಬಿಜೆಪಿಯವರು ಒಪ್ಪಿಲ್ಲ ರಾಜ್ಯಕ್ಕೆ ಎಂತ ಅನ್ಯಾಯ ಇದು ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಲೇವಡಿ ಮಾಡಿದೆ.
ಬಿಜೆಪಿ ರಾಜ್ಯಸಭೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಹೆಸರಿಲ್ಲ. ಇದೇ ವಿಚಾರವಾಗಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮಾಡಿದೆ. ಜೆಡಿಎಸ್ ಇಷ್ಟೊಂದು ವೀಕ್ ಆಗಬಾರದಿತ್ತು. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದುಕೊಂಡು ದೇವೇಗೌಡರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿಸೋಕೆ ಆಗಲಿಲ್ಲ ಅಂದ್ರೆ ಏನು ಅನ್ನೋದು? ಎಂದು ವ್ಯಂಗ್ಯ ಮಾಡಿದೆ.
ದೇವೆಗೌಡರು ಅಂದ್ರೆ ರೈತರ ಧ್ವನಿ ಮಣ್ಣಿನ ಮಗ ಅಂತವರು ರಾಜ್ಯಸಭೆಗೆ ಬೇಡ ಅಂತ ಬಿಜೆಪಿ ತೀರ್ಮಾನ ಮಾಡುತ್ತೆ ಅಂದ್ರೆ ರಾಜ್ಯಕ್ಕೆ ಇದಕ್ಕಿಂತ ಅವಮಾನ ಬೇರೆ ಇಲ್ಲ.
ದೇಶದಲ್ಲಿ ಈಗ ಬದುಕಿರುವ ಏಕೈಕ ಮಾಜಿ ಪ್ರಧಾನಿ ನಮ್ಮ ದೇವೇಗೌಡರು ಅವರನ್ನ ರಾಜ್ಯ ಸಭೆಗೆ ಆಯ್ಕೆ ಮಾಡೋದು ಬಿಜೆಪಿಯವರಿಗೆ ಇಷ್ಟ ಇಲ್ಲ ಅಂದ್ರೆ ಬಿಜೆಪಿಯವರು ಮನಸ್ಥಿತಿ ಇನ್ನು ಎಂತದ್ದಿರಬಹುದು. ಜೆಡಿಎಸ್ ನವರಿಗೆ ಸ್ವಲ್ಪನಾದರು ಸ್ಚಾಭಿಮಾನ ಇದ್ದರೆ ಮೊದಲು ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬರಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ