Daily Horoscope

Select Your Language

Notifications

webdunia
webdunia
webdunia
webdunia

ನಮ್ಮಂಥಾ ಹಿರಿಯರಿಗೆ ಬೆಲೆ ಕೊಡಲಿಲ್ಲ ಎಂದ ಕೆಎಚ್ ಮುನಿಯಪ್ಪ: ಮಂತ್ರಿಗಿರಿ ಸಿಕ್ಕರೂ ಕ್ಯಾತೆ

KH Muniyappa
ಬೆಂಗಳೂರು: ರಾಮಲಿಂಗಾ ರೆಡ್ಡಿ ರಾಜೀನಾಮೆ ಬಳಿಕ ಕಾಂಗ್ರೆಸ್ ನ ಮತ್ತೊಬ್ಬ ಹಿರಿಯ ಸಚಿವ ಕೆಎಚ್ ಮುನಿಯಪ್ಪ ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ನಮ್ಮಂತಹ ಹಿರಿಯರಿಗೆ ಬೆಲೆ ಕೊಡಲಿಲ್ಲ ಎಂದಿದ್ದಾರೆ.

ಡಿಕೆ ಶಿವಕುಮಾರ್ ಸಂಪುಟದಲ್ಲಿ ನಗರಾಭಿವೃಧ್ಧಿ ಖಾತೆಗೆ ಪಟ್ಟು ಹಿಡಿದಿರುವ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ತಮಗೆ ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇವರ ಬೆನ್ನಲ್ಲೇ ಈಗ ಮತ್ತೊಬ್ಬ ಹಿರಿಯ ನಾಯಕ ಕೆಎಚ್ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸೇವಾ ಖಾತೆ ಹೊಂದಿದ್ದ ಕೆಎಚ್ ಮುನಿಯಪ್ಪಗೆ ಡಿಕೆಶಿ ಸಂಪುಟದಲ್ಲೂ ಅದೇ ಖಾತೆ ನೀಡಲಾಗಿದೆ.

ಆದರೆ ಈಗ ರಾಮಲಿಂಗಾ ರೆಡ್ಡಿ ರಾಜೀನಾಮೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅಸಮಾಧಾನ ಹೊರಹಾಕಿದ ಮುನಿಯಪ್ಪ ‘ಖಾತೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ನಮ್ಮಂತಹ ಹಿರಿಯರಿಗೆ ಸೂಕ್ತ ಸ್ಥಾನ ನೀಡಲಿಲ್ಲ. ನಾನು, ರಾಮಲಿಂಗಾ ರೆಡ್ಡಿ 7-8 ಬಾರಿ ಶಾಸಕರಾಗಿದ್ದೇವೆ. ನಮಗೆ ಸೂಕ್ತ ಸ್ಥಾನ ನೀಡಬೇಕಿತ್ತು. ಎಐಸಿಸಿ ಎನ್ನುವುದು ನಮಗೆಲ್ಲಾ ತಾಯಿ ಇದ್ದಂತೆ. ತಾಯಿ ಎಲ್ಲಾ ಮಕ್ಕಳನ್ನೂ ಸಮಾನವಾಗಿ ನೋಡಬೇಕು’ ಎಂದು ಅಸಮಾಧಾನ ಹೊರಹಾಕಿದ್ದಾರೆ. ಡಿಕೆಶಿ ಸಂಪುಟದಲ್ಲಿ ಕೆಲವರಿಗೆ ಖಾತೆ ಸಿಕ್ಕಿಲ್ಲ ಎಂಬ ಬೇಸರವಾದರೆ ಮತ್ತೆ ಕೆಲವರಿಗೆ ಸಿಕ್ಕ ಖಾತೆ ಸರಿಯಿಲ್ಲ ಎಂಬ ಕ್ಯಾತೆ. ಈ ಅಸಮಾಧಾನದ ಹೊಗೆ ಯಾವ ಮಟ್ಟಕ್ಕೆ ತಲುಪುತ್ತದೆ ನೋಡಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಈಗ ಅಧಿಕೃತ: ಒಳ್ಳೆ ನಾಯಕನನ್ನು ಉಳಿಸಿಕೊಳ್ಳದ ಬಿಜೆಪಿ