Daily Horoscope

Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಟ್ರಬಲ್ ಶೂಟರ್ ಎಂದು ಸುಮ್ನೇ ಹೇಳಲ್ಲ: ರಾಹುಲ್ ಒಂದು ಸೂಚನೆಗೆ ಮಾಡಿದ್ದೇನು

DK Shivakumar
ಬೆಂಗಳೂರು: ಡಿಕೆ ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್ ಎಂದು ಸುಮ್ನೇ ಹೇಳಲ್ಲ. ರಾಹುಲ್ ಗಾಂಧಿ ಒಂದು ಸೂಚನೆ ಮೇರೆಗೆ ಸಿಎಂ ಡಿಕೆ ಶಿವಕುಮಾರ್ ಮಾಡಿದ ಕೆಲಸವೇನು ನೋಡಿ.

ರಾಮಲಿಂಗಾ ರೆಡ್ಡಿ ತಮಗೆ ಸಿಕ್ಕ ಖಾತೆ ಬಗ್ಗೆ ಅಸಮಧಾನಗೊಂಡು ರಾಜೀನಾಮೆ ನೀಡಿದ್ದರು. ಅವರ ಮನವೊಲಿಕೆಗೆ ಸ್ವತಃ ರಾಹುಲ್ ಗಾಂಧಿ ನಿನ್ನೆ ಬೆಂಗಳೂರಿಗೆ ಬಂದಾಗ ಪ್ರಯತ್ನ ಪಟ್ಟಿದ್ದರು. ಆದರೆ ರಾಮಲಿಂಗಾ ರೆಡ್ಡಿ ಯಾರ ಕೈಗೂ ಸಿಗಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಆದರೆ ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ, ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಮಾಡೋದು ಬೇಡ. ರಾಮಲಿಂಗಾ ರೆಡ್ಡಿ ಮನವೊಲಿಕೆಗೆ ಪ್ರಯತ್ನ ಪಡಿ ಎಂದು ಸೂಚನೆ ಕೊಟ್ಟಿದ್ದರು. ಅದರಂತೆ ಡಿಕೆ ಶಿವಕುಮಾರ್ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಯಾರಿಗೂ ಸಿಗದ ರಾಮಲಿಂಗಾ ರೆಡ್ಡಿಯವರನ್ನು ಸಂಜೆ ವೇಳೆಗೆ ಜಯನಗರದ ಹೋಟೆಲ್ ಒಂದರಲ್ಲಿ ಭೇಟಿ ಮಾಡಿದ್ದಾರೆ. ಸುಮಾರು 2 ತಾಸು ಇಬ್ಬರೂ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಅದಾದ ಮೇಲೆ ಮಾಧ್ಯಮಗಳು ಪ್ರಶ್ನಿಸಿದಾಗ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ನಿಜವಾಗಿಯೂ ಏನು ಮಾತುಕತೆಯಾಗಿತ್ತು ಎನ್ನುವುದು ಬಹಿರಂಗವಾಗಿಲ್ಲ. ಹಾಗಿದ್ದರೂ ಸದ್ಯಕ್ಕೆ ಬಂಡಾಯಕ್ಕೆ ತೇಪೆ ಹಚ್ಚಲಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಮಲಿಂಗಾ ರೆಡ್ಡಿ ಡಿಮ್ಯಾಂಡ್ ಮಾಡಿದ್ದ ನಗರಾಭಿವೃದ್ಧಿ ಖಾತೆ ತಪ್ಪಿಸಿದವರು ಯಾರೆಂಬುದು ಬಯಲು