Publish Date: Sat, 06 Jun 2026 (08:46 IST)
Updated Date: Sat, 06 Jun 2026 (08:55 IST)
ಬೆಂಗಳೂರು: ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ತಾವು ಡಿಮ್ಯಾಂಡ್ ಮಾಡಿದ್ದ ನಗರಾಭಿವೃದ್ಧಿ ಖಾತೆ ಸಿಗಲಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಿದ್ದರೆ ರಾಮಲಿಂಗಾ ರೆಡ್ಡಿಗೆ ನಗರಾಭಿವೃದ್ಧಿ ಖಾತೆ ತಪ್ಪಿಸಿದ್ದು ಯಾರು?
ಜೂನ್ 3 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ರಾಮಲಿಂಗಾ ರೆಡ್ಡಿ ಎರಡೇ ದಿನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಗರಾಭಿವೃದ್ಧಿ ಖಾತೆಗೆ ರಾಮಲಿಂಗಾ ರೆಡ್ಡಿ ಬೇಡಿಕೆಯಿಟ್ಟಿದ್ದರು. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಕೂಡಾ ಒಪ್ಪಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ.
ಇದು ಅವರ ಸಿಟ್ಟಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೈಕಮಾಂಡ್ ಅವರ ಒತ್ತಡಕ್ಕೆ ಮಣಿಯುವ ಬದಲು ಸಿಎಂ ಡಿಕೆ ಶಿವಕುಮಾರ್ ಬಳಿ ಮನವೊಲಿಸಿ ಜಲಸಂಪನ್ಮೂಲ ಖಾತೆಯನ್ನೇ ಒಪ್ಪಿಕೊಳ್ಳಲು ಸೂಚನೆ ನೀಡಿದೆ.
ಹಾಗಿದ್ದರೆ ಅವರಿಗೆ ನಗರಾಭಿವೃದ್ಧಿ ಖಾತೆ ನಿರಾಕರಿಸಿದವರು ಯಾರು? ಈ ಪ್ರಶ್ನೆಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ನಾನು ನಗರಾಭಿವೃದ್ಧಿ ಖಾತೆ ನೀಡೋಣ ಎಂದು ಒಪ್ಪಿದ್ದು ನಿಜ. ಆದರೆ ಹೈಕಮಾಂಡ್ ಆದೇಶವನ್ನು ನಾವೆಲ್ಲಾ ಪಾಲಿಸಬೇಕಾಗುತ್ತದೆ ಎಂದಿದ್ದಾರೆ. ಆ ಮೂಲಕ ಹೈಕಮಾಂಡೇ ಅವರಿಗೆ ನಗರಾಭಿವೃದ್ಧಿ ಖಾತೆಯ ಬದಲು ಜಲಸಂಪನ್ಮೂಲ ಖಾತೆ ಸಿಗುವಂತಾಗಲು ಕಾರಣ ಎಂಬುದು ಪಕ್ಕಾ ಆಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ