Select Your Language

Notifications

webdunia
webdunia
webdunia
webdunia

ನಾನು ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ: ಡಿಕೆ ಶಿವಕುಮಾರ್‌

MLA Ramalinga Reddy Resignation
ಬೆಂಗಳೂರು: ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದು ನಿಜ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,  ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ. ನಾನು ನನ್ನ ತಮ್ಮ ಹೋಗಿ ಮಾತು ಕೊಟ್ಟಿದ್ದೇವು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಖಾತೆ ಕೈತಪ್ಪಿರುವುದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

'ರಾಮಲಿಂಗಾರೆಡ್ಡಿ ಅವರು ಅತ್ಯಂತ ಹಿರಿಯ ನಾಯಕರು. ನಾನು ಅವರಿಗೆ ಒಂದು ಖಾತೆ ನೀಡುವ ಬಗ್ಗೆ ಮಾತು ಕೊಟ್ಟಿದ್ದು ನಿಜ. ಸಾರಿಗೆ ಇಲಾಖೆಯ ಜೊತೆಗೆ ಬೇರೆಯವರುಗೆ ಕೊಟ್ಟಿದ್ದ ಮುಜರಾಯಿ ಖಾತೆಯನ್ನು ಇವರಿಗೆ ಕೊಡಿಸಿದ್ದೆವು.  ಆದರೆ ಈಗ ಹೈಕಮಾಂಡ್ ತೀರ್ಮಾನದಂತೆ ಕೃಷ್ಣಬೈರೇಗೌಡರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲಾಗಿದೆ. ಈ ಬೆಳವಣಿಗೆ ಬಳಿಕ ರಾಮಲಿಂಗಾ ರೆಡ್ಡಿಗೆ ಖಾತೆ ಕೊಡಿಸಲು ಪ್ರಯತ್ನ ಪಟ್ಟಿದ್ದೆ, ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಪುರದಲ್ಲಿ ಶಂಕಿತ ಎಬೋಲಾ ಪ್ರಕರಣ ವರದಿ, ಮಹಿಳೆಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ