Daily Horoscope

Select Your Language

Notifications

webdunia
webdunia
webdunia
webdunia

ಸಿಎಂ ಆಗುವ ಆಸೆಯನ್ನು ಪೂರೈಸಿಕೊಂಡಿರುವ ಡಿಕೆಶಿಗೆ ಸವಾಲುಗಳು ಹಲವು

DCM DK Shivkumar
ಮಂಡ್ಯ: ಡಿಕೆ ಶಿವಕುಮಾರ್ ಅವರ ಮಂತ್ರಿಮಂಡಲ ನೋಡಿದಾಗ ಸಿದ್ದರಾಮಯ್ಯನವರ ಕ್ಯಾಬಿನೆಟ್ ಎಂದು ಸ್ಪಷ್ಟವಬಾಗಿ ಗೋಚರಿಸುತ್ತದೆ. ಅವರು ಕುರ್ಚಿಯಿಂದ ಇಳಿದು ಹೋಗುವಾಗ ಗೂಗ್ಲಿ ಎಸೆದು ಹೋಗಿದ್ದಾರೆ. ಆದ್ದರಿಂದ ನೂತನ ಸಿಎಂಗೆ ಹನಿಮೂನ್ ಪೀರಿಯಡ್ರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯಮಾಡಿದ್ದಾರೆ. 

ಕೆ.ಆರ್‌.ಪೇಟೆಯಲ್ಲಿ ಗುರುವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಆಗುವ ಆಸೆಯನ್ನು ಪೂರೈಸಿಕೊಂಡಿರುವ ಡಿಕೆ ಶಿವಕುಮಾರ್‌ ಅವರ ಮುಂದೆ ಹಲವು ಸವಾಲುಗಳಿವೆ ಎಂದರು. 

ಸಿದ್ದರಾಮಯ್ಯನವರು ಕಡೇ ಕ್ಷಣದಲ್ಲಿ ಹಿಂದುಳಿದ ವರ್ಗಗಳ ವರದಿ ಸ್ವೀಕರಿಸಿ, ನೂತನ ಸಿಎಂ ಏನು ಮಾಡುತ್ತಾರೆ ಎಂಬ ಸವಾಲು ಬಿಟ್ಟು ಹೋಗಿದ್ದಾರೆ’ ಎಂದರು. 

ಕಳೆದ 3 ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರವು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ರಾಜಕಾರಣ ಮಾಡಿದ್ದಾರೆ. ಇದನ್ನೇ ಡಿಕೆಶಿ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ ವಿನಾ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದೇ ಒಂದು ದೊಡ್ಡ ಸವಾಲು ಎಂದು ಹೇಳಿದರು.  

ನಾವು ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವೈಫಲ್ಯವನ್ನು ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ 40 ಪರ್ಸೆಂಟ್‌ ಕಮಿಷನ್‌ ಇತ್ತು. ಈಗ ಶಿವಕುಮಾರ್‌ ಇದನ್ನೆಲ್ಲ ಸರಿಪಡಿಸುತ್ತಾರೆ ಕಾದು ನೋಡಬೇಕು ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿಂದಪುರ 6ಜನರ ಹತ್ಯೆ ಪ್ರಕರಣ: ತನಿಯಲ್ಲಿ ಮಹತ್ವದ ಬೆಳವಣಿಗೆ