Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಅವರು ಆರಾಧಿಸುವ ಅಜ್ಜಯ್ಯನ ಕ್ಷೇತ್ರದ ಬಗ್ಗೆ ಇಲ್ಲಿದೆ ಮಾಹಿತಿ

Ajjayya
Photo Courtesy X
ಬೆಂಗಳೂರು: ಅಜ್ಜಯ್ಯನ ಹೆಸರಿನಲ್ಲಿ ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಪರಮ ಭಕ್ತ. ತನ್ನ ಜೀವನದ ಪ್ರತಿ ಹಾದಿಯಲ್ಲೂ, ಅದರಲ್ಲೂ ಪ್ರತಿ ಭಾರೀ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಯಾದಾಗ ಡಿಕೆಶಿ ಅಜ್ಜಯ್ಯನ ಮೊರೆ ಹೋಗುತ್ತಿದ್ದರು. 

ಇನ್ನೂ ಡಿಕೆ ಶಿವಕುಮಾರ್‌ ಅವರು ಸಿಎಂ ಆಗಿ ಘೋಷಣೆ ಬೆನ್ನಲ್ಳೇ ತನ್ನ ಸಿಎಂ ಕೊಠಡಿಯಲ್ಲಿ ಅಜ್ಜಯ್ಯನ ಫೋಟೋ ಅದಲ್ಲದೆ, ಪ್ರಮಾಣ ವಚನ ಸ್ವೀಕಾರದ ವೇದಿಕೆಯಲ್ಲೂ ಅಜ್ಜಯ್ಯನ ಫೋಟೋ ಇರಿಸಿ, ಅದಕ್ಕೆ ನಮಸ್ಕರಿಸಿಯೇ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. 

ಈ ಲೇಖನದಲ್ಲಿ ಅಜ್ಜಯ್ಯನ ಸ್ಥಳ ಹಾಗೂ ಧಾರ್ಮಿಕ ಸ್ಥಳದ ಬಗ್ಗೆ ಇಲ್ಲಿದೆ ಇತಿಹಾಸ. 

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ನೊಣವಿನಕೆರೆ 'ಕಾಡಸಿದ್ದೇಶ್ವರ ಮಠ'ವು 500 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಈ ಮಠದಲ್ಲಿ ಪೂಜಿಸಲ್ಪಡುವ ಯತಿ ಶ್ರೇಷ್ಠರನ್ನು ಭಕ್ತಿಪೂರ್ವಕವಾಗಿ "ನೊಣವಿನಕೆರೆ ಅಜ್ಜಯ್ಯ" ಎಂದು ಕರೆಯಲಾಗುತ್ತದೆ. 

ಮಠದ ಮೂಲ: ಈ ಪವಿತ್ರ ಕ್ಷೇತ್ರವನ್ನು ನೊಳಂಬ ರಾಜರು ಕಟ್ಟಿಸಿದ ಕೆರೆಯ ಸಮೀಪ ಸ್ಥಾಪಿಸಲಾಗಿದ್ದು, ಪಾಶುಪತ ಶೈವ ಸಂಪ್ರದಾಯದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿನ ಕಾಡಸಿದ್ದೇಶ್ವರ ಸ್ವಾಮಿಯನ್ನು ಈಶ್ವರನ ಪ್ರತಿರೂಪವೆಂದು ನಂಬಲಾಗುತ್ತದೆ. 

ಅಜ್ಜಯ್ಯನವರು: ಕಾಡಸಿದ್ದೇಶ್ವರ ಮಠದ ಪರಂಪರೆಯಲ್ಲಿ ಬಂದ ಸಿದ್ಧಿಪುರುಷರು ಹಾಗೂ ಯೋಗಿಗಳನ್ನು ಭಕ್ತರು 'ಅಜ್ಜಯ್ಯ' ಎಂದು ಕರೆಯುತ್ತಾರೆ. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ದೈವಿಕ ಶಕ್ತಿಯುಳ್ಳವರು ಎಂಬುದು ಜನರ ಗಾಢ ನಂಬಿಕೆಯಾಗಿದೆ.

ನೊಣವಿನಕೆರೆ ಅಜ್ಜಯ್ಯನವರ ಆಶೀರ್ವಾದವಿಲ್ಲದೆ ಈ ಭಾಗದಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. 

ಕರ್ನಾಟಕದ ರಾಜಕೀಯ ವಲಯದಲ್ಲಿ ಈ ಮಠಕ್ಕೆ ವಿಶೇಷ ಸ್ಥಾನವಿದೆ. ಮುಖ್ಯಮಂತ್ರಿ ಅಥವಾ ಡಿಸಿಎಂ ಆಗುವಂತಹ ಮಹತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುನ್ನ ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಅಜ್ಜಯ್ಯನವರ ಅಭಯ ಮತ್ತು ಮಾರ್ಗದರ್ಶನವನ್ನು ಪಡೆಯುವುದು ವಾಡಿಕೆಯಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

DK Shivakumar oath ceremony live: ವಿಶೇಷ ವ್ಯಕ್ತಿಯ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಡಿಕೆ ಶಿವಕುಮಾರ್