Select Your Language

Notifications

webdunia
webdunia
webdunia
webdunia

ಕೊರೊನಾ ಇದೆ ಅಂತ ಪೊಲೀಸರಿಗೆ ಭಯ ಹುಟ್ಟಿಸಿ, ಬೆದರಿಸಿದ್ದವರ ಬಂಧನ

ಕೊರೊನಾ ಇದೆ ಅಂತ ಪೊಲೀಸರಿಗೆ ಭಯ ಹುಟ್ಟಿಸಿ, ಬೆದರಿಸಿದ್ದವರ ಬಂಧನ
ಮಂಡ್ಯ , ಗುರುವಾರ, 9 ಏಪ್ರಿಲ್ 2020 (17:31 IST)
ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲ್ ತೋರಿಸಿ ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸರಿಗೆ ನಿಮಗೂ ಕೊರೊನಾ ವೈರಸ್ ತಗಲುತ್ತದೆ ನಮ್ಮನ್ನು ಮುಟ್ಟಬೇಡಿ ಅಂತ ಬೆದರಿಸಿ ಪರಾರಿಯಾಗಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕೃಷ್ಣರಾಜಪೇಟೆ ತಾಲ್ಲೂಕಿನ ತೆಂಡೇಕೆರೆ  ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ  ಮೂವರು ಯುವಕರನ್ನು ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್  ಲಕ್ಷ್ಮಣ್ ಅವರ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಚರಣೆ ನಡೆಸಿ  ಪತ್ತೆ ಮಾಡಿ ಬಂಧಿಸಿದ್ದಾರೆ. ಇದರಿಂದಾಗಿ ತಾಲ್ಲೂಕಿನ ಜನತೆಯಲ್ಲಿ ಉಂಟಾಗಿದ್ದ  ಆತಂಕವನ್ನು ಕೃಷ್ಣರಾಜಪೇಟೆ ಗ್ರಾಮಾಂತರ ಪೋಲಿಸರು ದೂರ ಮಾಡಿದ್ದಾರೆ.

ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ ಮಹೇಶ್.ಬಿನ್ ಕೆಂಪಟ್ಟಿಗೌಡ, ಅಭಿಶೇಕ್ ಬಿನ್ ಮಹೇಶ, ಶ್ರೀನಿವಾಸ್ ಬಿನ್ ಪುಟ್ಟರಾಜು ಬಂಧಿತ ಯುವಕರು ಎಂದು ಪೊಲೀಸರು ತಿಳಿಸಿದ್ದಾರೆ.

ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಹಿಡಿದುಕೊಳ್ಳುವ ಭಯದಿಂದ ನಮಗೆ ಕೊರೊನಾ ಇದೆ. ಮುಟ್ಟಿದರೆ ನಿಮಗೂ ಬರುತ್ತದೆ  ನೋಡಿ  ಎಂದು ಕೈಯಲ್ಲಿದ್ದ ಸೀಲ್ ತೋರಿಸಿ ಭಯಹುಟ್ಟಿಸಿ ಯುವಕರು ಪರಾರಿಯಾಗಿದ್ದರು. ಘಟನೆ ನಡೆದ ಕೇವಲ 12 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿಯಲ್ಲೂ ಮನೆಬಿಟ್ಟು ಓಡಿಹೋದ ಲವರ್ಸ್