ಬೆಂಗಳೂರು: ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಎನ್ನುವುದು ಇದಕ್ಕೇ ಇರಬೇಕು. ಕೇಂದ್ರ ಜಿಎಸ್ ಟಿ ಇಳಿಕೆ ಮಾಡಿ ನಂದಿನಿ ತುಪ್ಪದ ಬೆಲೆ ಇಳಿಕೆಯಾಗಿದೆ ಎಂಬ ಖುಷಿಯಲ್ಲಿದ್ದಾಗಲೇ ಈಗ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟಿದೆ.
ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಿಎಸ್ ಟಿ ಇಳಿಕೆ ಮಾಡಿ ಹಲವು ವಸ್ತುಗಳ ದರ ಇಳಿಕೆಯಾಗಿತ್ತು. ಇದರಲ್ಲಿ ನಂದಿನಿ ತುಪ್ಪವೂ ಸೇರಿತ್ತು. ಅದರಂತೆ ನಂದಿನಿ ತುಪ್ಪದ ಬೆಲೆ 40 ರೂ. ಇಳಿಕೆಯಾಗಿತ್ತು. ಆದರೆ ಈಗ 90 ರೂ. ಏರಿಕೆ ಮಾಡಿ ಶಾಕ್ ಕೊಟ್ಟಿದೆ.
ನಂದಿನಿ ತುಪ್ಪದ ಬೆಲೆ ಇಂದಿನಿಂದಲೇ ಪ್ರತೀ ಲೀಟರ್ ಗೆ 90 ರೂ. ಏರಿಕೆಯಾಗಲಿದೆ. ಇದರೊಂದಿಗೆ 610 ರೂ. ಇದ್ದ ನಂದಿನಿ ತುಪ್ಪದ ಬೆಲೆ ಈಗ 700 ರೂ. ಗೆ ತಲುಪಿದೆ. ಇಂದಿನಿಂದಲೇ ಹೊಸ ದಾರಿ ಜಾರಿಯಾಗಲಿದ್ದು ಜಿಎಸ್ ಟಿಯಿಂದಾಗಿ ದರ ಇಳಿಕೆಯ ಖುಷಿಯಲ್ಲಿದ್ದ ಗ್ರಾಹಕರಿಗೆ ಇದು ಅಕ್ಷರಶಃ ಶಾಕ್ ಆಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಕೆಎಂಎಫ್ ಸಮಜಾಯಿಷಿ ನೀಡಿದೆ.