Publish Date: Wed, 25 Dec 2019 (19:12 IST)
Updated Date: Wed, 25 Dec 2019 (19:13 IST)
ಕೇಸರಿ ಹಾಕಿರುವವರನ್ನು ಮಾತ್ರ ಪ್ರೀತಿಸಬೇಡಿ. ಎಲ್ಲಾ ಜಾತಿ -ವರ್ಗಗಳ ಜನರನ್ನೂ ಪ್ರೀತಿಸುವುದನ್ನು ಕಲಿಯಿರಿ. ಇಲ್ಲದಿದ್ದರೆ ತಕ್ಕ ಶಾಸ್ತಿ ಅನುಭವಿಸುತ್ತೀರಿ. ಹೀಗಂತ ಪ್ರಧಾನಿ ಮೋದಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಎನ್.ಆರ್.ಸಿ ಮತ್ತು ಸಿಎಎ ಜಾರಿಗೂ ಮುನ್ನ ಸರ್ವ ಪಕ್ಷಗಳ ಸಭೆ ಕರೆದು ಒಮ್ಮತದ ನಿರ್ಧಾರ ಕೈಗೊಳ್ಳಿ. ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ವಿಚಾರದಲ್ಲಿ ಆತುರಬೇಡ. ಹೀಗಂತ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.
ಎನ್.ಆರ್.ಸಿ ಮತ್ತು ಸಿಎಎ ಜಾರಿ ವಿರುದ್ಧ ಕಿಡಿ ಕಾರಿದ ಮಾಜಿ ಶಾಸಕ ಕೆಬಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ರು.
ಪೌರತ್ವ ಕಾಯ್ದೆ ತಿದ್ದುಪಡಿ ಜಾರಿ ವಿರೋಧಿಸಿ ಮುಸ್ಲಿಂ ಬಂಧುಗಳು ನಡೆಸಿದ ಪ್ರತಿಭಟನೆಯಲ್ಲಿ ವೈರತ್ವ ಮರೆತು ಒಂದಾಗಿ ಭಾಗವಹಿಸಿದ್ದ ಜೆಡಿಎಸ್ , ಕಾಂಗ್ರೆಸ್ ಮುಖಂಡರು ಗಮನ ಸೆಳೆದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಹೋರಾಟಕ್ಕೆ ಬೆಂಬಲ ನೀಡಿ ಸಾಥ್ ಕೊಟ್ಟಿತು ಜೆಡಿಎಸ್ ಪಕ್ಷ.