Publish Date: Wed, 25 Dec 2019 (19:06 IST)
Updated Date: Wed, 25 Dec 2019 (19:08 IST)
ಮಂಗಳೂರು ಗೋಲಿಬಾರ್ ನಲ್ಲಿ ಮೃಪಟ್ಟವರಿಗೆ ಪರಿಹಾರ ವಿಚಾರವಾಗಿ ಸಿಎಂ ನೀಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಪರಿಹಾರ ನೀಡದ ಬಗ್ಗೆ ಮತ್ತೆ ಪುನರುಚ್ಚರಿಸಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪನವರು. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮೂಡಬಿದ್ರೆ ಕಡಲಕೆರೆಯಲ್ಲಿ ಹೇಳಿಕೆ ನೀಡಿರೋ ಸಿಎಂ ಬಿ.ಎಸ್.ಯಡಿಯೂರಪ್ಪ, ಮೃತರಿಬ್ಬರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ.
ಇಬ್ಬರು ಮಾಡಿದ ಅಪರಾಧಗಳು ಸಾಬೀತಾಗುತ್ತಿದೆ. ಆದ್ದರಿಂದ ಪರಿಹಾರ ಕೊಡಬಾರದು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಈ ಬಗ್ಗೆ ಕುಳಿತು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತೆ ಅಂತ ಸಿಎಂ ಹೇಳಿದ್ದಾರೆ.