Select Your Language

Notifications

webdunia
webdunia
webdunia
webdunia

ಸಿಎಎಯಿಂದ ಭಾರತೀಯ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುತ್ತಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ

ಸಿಎಎಯಿಂದ ಭಾರತೀಯ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುತ್ತಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ
ನವದೆಹಲಿ , ಸೋಮವಾರ, 23 ಡಿಸೆಂಬರ್ 2019 (09:48 IST)
ನವದೆಹಲಿ: ಪೌರತ್ವ ಖಾಯಿದೆ ವಿರುದ್ಧ ಅನಗತ್ಯ ಗೊಂದಲದಿಂದಾದಿ ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೆ ಈ ಖಾಯಿದೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಈ ಖಾಯಿದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಸಿಎಎ ಎಂದರೆ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವುದಲ್ಲ. ನಾವು ಯಾವುದೇ ಖಾಯಿದೆಯನ್ನು ಜಾತಿ, ಧರ್ಮ ನೋಡಿಕೊಂಡು ಮಾಡುವುದಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಖಾಯಿದೆ ಗೊತ್ತಿಲ್ಲದವರು ಓದಿ ತಿಳಿದುಕೊಳ್ಳಲಿ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಬಗ್ಗೆ ಕಾಂಗ್ರೆಸ್ ಮತ್ತು ನಗರ ನಕ್ಸಲರು ಸುಳ‍್ಳು ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಹಿಂಸಾಚಾರಗಳು ನಡೆಯುತ್ತಿವೆ. ನನ್ನನ್ನು ಆಗದವರು ಬೇಕಾದರೆ ನನ್ನ ಪ್ರತಿಕೃತಿ ದಹಿಸಲಿ. ಆದರೆ ದೇಶದ ಸಂಪತ್ತಿಗೆ, ಸರಕಾರಿ ವಸ್ತುಗಳಿಗೆ ಹಾನಿ ಮಾಡಬೇಡಿ ಎಂದು ಪ್ರಧಾನಿ ಮೋದಿ ಖಾರವಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಎ ವಿರೋಧದ ಪ್ರತಿಭಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪಾಕ್ ಪ್ರಧಾನಿ