Select Your Language

Notifications

webdunia
webdunia
webdunia
webdunia

Karnataka Weather: ಕರ್ನಾಟಕದಲ್ಲಿ ಇಂದು ಹೇಗಿರಲಿದೆ ಹವಾಮಾನ

Bengaluru weather today
ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಚಳಿ ತೀವ್ರವಾಗಿದೆ. ಇಂದು ಹವಾಮಾನ ಹೇಗಿರಲಿದೆ ಇಲ್ಲಿದೆ ಇಂದಿನ ಹವಾಮಾನ ವರದಿ.

ಈ ವಾರವಿಡೀ ಹಗಲಿಡೀ ಬಿಸಿಲು, ರಾತ್ರಿ ಚಳಿ ಎನ್ನುವ ಪರಿಸ್ಥಿತಿಯಿದೆ. ಹಗಲು ಬೆಳಿಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ನಿನ್ನೆ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ಇಳಿಕೆಯಾಗಿತ್ತು. ಕಳೆದ ಎರಡು ದಿನಗಳಿಂದ ಮತ್ತೆ ಚಳಿ ತೀವ್ರವಾಗಿದೆ.

ಇಂದೂ ರಾಜ್ಯದ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರಲಿದೆ. ಗರಿಷ್ಠ ತಾಪಮಾನ 28 ಡಿಗ್ರಿಯಷ್ಟಿರುವ ಸಾಧ್ಯತೆಯಿದೆ. ವಾರಂತ್ಯದ ವೇಳೆ ತಾಪಮಾನದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಮಳೆಯ ಸಾಧ್ಯತೆಯಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕನಿಷ್ಠ ತಾಪಮಾನ 16 ಡಿಗ್ರಿಗೆ ಕುಸಿದಿದೆ. ಬೆಳಗ್ಗಿನ ಸಮಯ ಮಂಜು, ತಿವ್ರ ಚಳಿ ಕಂಡುಬರುತ್ತಿದ್ದು ವಾಕಿಂಗ್ ಮಾಡುವುದಕ್ಕೆ ಸೂಕ್ತ ವಾತಾವರಣವಿಲ್ಲ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಎಂದಿನಂತೆ ಬಿಸಿಲು, ಶುಷ್ಕ ವಾತಾವರಣ ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾತ್ರಿ ಮನೆಗೆ ಹೋಗಲ್ಲ.. ವಿಧಾನಸೌಧದಲ್ಲೇ ಬಿಜೆಪಿ ಶಾಸಕರು ಮೊಕ್ಕಾಂ Video