Publish Date: Tue, 03 Feb 2026 (08:49 IST)
Updated Date: Tue, 03 Feb 2026 (08:52 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರತೆ ಕಡಿಮೆಯಾಗಿತ್ತು. ಆದರೆ ಇಂದು ಮತ್ತೆ ಮೈ ಕೊರೆಯುವ ಚಳಿಯಿರಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಕಳೆದ ಕೆಲವು ದಿನಗಳಿಂದ ಚಳಿ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಹಾಗಿದ್ದರೂ ಬೆಳಿಗ್ಗಿನ ವೇಳೆಗೆ ಮಂಜು ಬೀಳುತ್ತಿದ್ದು ರಾತ್ರಿ ಚಳಿ ಕಂಡುಬರುತ್ತಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಕನಿಷ್ಠ ತಾಪಮಾನ ಸರಾಸರಿ 18 ಡಿಗ್ರಿಯಷ್ಟಿತ್ತು. ಆದರೆ ಇಂದು ಮತ್ತೆ ಇಳಿಕೆಯಾಗಲಿದೆ.
ಮುಂದಿನ ಮೂರು ದಿನಗಳಿಗೆ ಹಗಲು ವಿಪರೀತ ಬಿಸಿಲು ಕಂಡುಬರಲಿದೆ. ಹಾಗಿದ್ದರೂ ಇಂದು ಕನಿಷ್ಠ ತಾಪಮಾನ ಸರಾಸರಿ 16 ಡಿಗ್ರಿಯಷ್ಟು ಇಳಿಕೆಯಾಗಲಿದೆ. ಗರಿಷ್ಠ ತಾಪಮಾನ ನಿನ್ನೆಯಷ್ಟೇ ಇರಲಿದ್ದು ಇಂದೂ 28 ಡಿಗ್ರಿಯಷ್ಟಿರಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ಕತೆ. ಬೆಳಿಗ್ಗೆ ದಟ್ಟ ಮಂಜು ಚಳಿಯಿಂದ ಕೂಡಿದ್ದರೆ ಹಗಲಿಡೀ ಬಿಸಿಲಿನ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರಲಿದೆ. ಕರಾವಳಿ ಜಿಲ್ಲೆಗಳಲ್ಲಂತೂ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟು ಕಂಡುಬರುವುದು. ಮುಂದೆ ಬಿಸಿಲಿನ ಝಳ ಹೆಚ್ಚಾಗುತ್ತಾ ಹೋಗಲಿದೆ.