Publish Date: Fri, 30 Jan 2026 (08:35 IST)
Updated Date: Fri, 30 Jan 2026 (08:38 IST)
ಬೆಂಗಳೂರು: ರಾಜ್ಯದಲ್ಲಿ ಈಗ ಪ್ರತಿನಿತ್ಯವೂ ಹವಾಮಾನದಲ್ಲಿ ಹಠಾತ್ ಬದಲಾವಣೆಗಳು ಕಂಡುಬರುತ್ತಿದೆ. ಇಂದಿನ ಹವಾಮಾನ ಹೇಗಿರಲಿದೆ ಇಲ್ಲಿದೆ ನೋಡಿ ವಿವರ.
ರಾಜ್ಯದಲ್ಲಿ ಈ ವಾರದ ಆರಂಭದಲ್ಲಿ ಕೆಲವು ಕಡೆ ಮಳೆಯಿದ್ದರೆ ವಾರದ ಮಧ್ಯದಲ್ಲಿ ಚಳಿ ಹೆಚ್ಚಾಗಿತ್ತು. ಆದರೆ ಇಂದು ಚಳಿ ಕೊಂಚ ಮಟ್ಟಿಗೆ ಕಡಿಮೆಯಾಗಲಿದ್ದು, ಹಗಲಿಡೀ ಬಿಸಿಲಿನ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಹವಾಮಾನ ತಜ್ಞರ ಪ್ರಕಾರ ಫೆಬ್ರವರಿಯಿಂದಲೇ ಈ ವರ್ಷ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ. ಅದರ ಸೂಚನೆಯೇನೋ ಎಂಬಂತೆ ನಿನ್ನೆಯಂತೆ ಇಂದೂ ಹಗಲಿಡೀ ಬಿಸಿಲಿನ ವಾತಾವರಣವಿರಲಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ತಕ್ಕಮಟ್ಟಿಗೆ ಕಡಿಮೆಯಾಗಿದೆ.
ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 28 ಡಿಗ್ರಿಯಷ್ಟಿರಲಿದೆ. ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಇರಲಿದೆ ಎನ್ನಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಇದೇ ರೀತಿ ಇರಲಿದೆ. ಮುಂದಿನ ಎರಡು ದಿನಗಳಿಗೆ ಇದೇ ರೀತಿಯ ವಾತಾವರಣ ಕಂಡುಬರಲಿದೆ.