Publish Date: Sat, 07 Feb 2026 (08:28 IST)
Updated Date: Sat, 07 Feb 2026 (08:32 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಒಣಹವೆಯಿದ್ದು ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ವಾರಂತ್ಯಕ್ಕೆ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ.
ರಾಜ್ಯದ ಹವಾಮಾನದಲ್ಲಿ ಈಗ ದಿನಕ್ಕೊಂದು ವಿಚಿತ್ರ ಹವಾಮಾನ ಬದಲಾವಣೆ ಕಂಡುಬರುತ್ತಿದೆ. ಒಮ್ಮೆ ವಿಪರೀತ ಚಳಿ, ಹಗಲು ವಿಪರೀತ ಬಿಸಿಲು ಇನ್ನು ಕೆಲವರು ಕಡೆ ಭಾಗಶಃ ಮೋಡ ಕವಿದ ವಾತಾವರಣವೂ ಕಂಡುಬರುತ್ತಿದೆ.
ಈ ವಾರಂತ್ಯದಲ್ಲಿ ರಾಜ್ಯದದಲ್ಲಿ ಗರಿಷ್ಠ ತಾಪಮಾನದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇಂದು ಬಹುತೇಕ ಕಡೆ ಭಾಗಶಃ ಮೋಡ, ಬಿಸಿಲಿನ ವಾತಾವರಣವಿದ್ದರೆ ನಾಳೆ ಸಂಪೂರ್ಣ ಬಿಸಿಲಿರಲಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಿಸಿಲಿನ ಝಳ ಮತ್ತಷ್ಟು ಹೆಚ್ಚಾಗಿದೆ.
ಬಿಸಿಲಿನ ನಡುವೆಯೂ ಬೆಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಚಳಿಯೂ ಕಂಡುಬರುತ್ತಿದೆ. ಇಂದು ಮತ್ತು ನಾಳೆ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 29 ಡಿಗ್ರಿಗೆ ಏರಿಕೆಯಾಗಲಿದೆ. ಕನಿಷ್ಠ ತಾಪಮಾನ ಸರಾಸರಿ 18 ಡಿಗ್ರಿಯಷ್ಟಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.