Publish Date: Thu, 05 Feb 2026 (08:27 IST)
Updated Date: Thu, 05 Feb 2026 (08:30 IST)
ಬೆಂಗಳೂರು: ರಾಜ್ಯದಲ್ಲಿ ಇಂದೂ ಒಣ ಹವೆ ಮುಂದುವರಿಯಲಿದೆ. ಎಲ್ಲೂ ಮಳೆಯ ಸಾಧ್ಯತೆಯಿಲ್ಲ. ಉಳಿದಂತೆ ಇಂದಿನ ಹವಾಮಾನ ಹೇಗಿರಲಿದೆ ಇಲ್ಲಿ ಸಂಪೂರ್ಣ ವಿವರ.
ಕಳೆದ ಎರಡು-ಮೂರು ದಿನಗಳಿಂದ ರಾಜ್ಯದಲ್ಲಿ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಗೆ ಇಳಿಕೆಯಾಗಿದ್ದು ರಾತ್ರಿ ವೇಳೆ ಚಳಿಯ ವಾತಾವರಣ ಕಂಡುಬರುತ್ತಿದೆ. ಇದರ ಜೊತೆಗೆ ದಟ್ಟ ಮಂಜೂ ಇದೆ. ಆದರೆ ಹಗಲಿಡೀ ವಿಪರೀತ ಬಿಸಿಲಿನ ವಾತಾವರಣವಿದೆ.
ಇಂದೂ ರಾಜ್ಯದ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರಲಿದ್ದು ಗರಿಷ್ಠ ತಾಪಮಾನ 28 ಡಿಗ್ರಿಯಷ್ಟು ಕಂಡುಬರಲಿದೆ. ಇಂದೂ ರಾತ್ರಿ ಚಳಿಯಿದ್ದು ಹಗಲು ಬಿಸಿಲಿನ ವಾತಾವರಣವಿರಲಿದೆ. ಬೆಂಗಳೂರಿನಲ್ಲೂ ಇದೇ ವಾತಾವರಣವಿರಲಿದೆ.
ಕರಾವಳಿ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದ್ದು ಗರಿಷ್ಠ ತಾಪಮಾನ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿಗೆ ಏರಿಕೆಯಾಗಿದ್ದರೆ ಕನಿಷ್ಠ ತಾಪಮಾನ 23 ಡಿಗ್ರಿಯಷ್ಟಿದೆ. ನಾಳೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ತಾಪಮಾನದಲ್ಲಿ ಏರಿಕೆ ಕಂಡುಬರುವ ಸಾಧ್ಯತೆಯಿದೆ.