Daily Horoscope

Select Your Language

Notifications

webdunia
webdunia
webdunia
webdunia

Karnataka Weather: ಬೇಸಿಗೆ ಮಳೆಗೆ ಇಂದು ಕೊಂಚ ಬ್ರೇಕ್, ಇಂದಿನ ಹವಾಮಾನ ವರದಿ ಇಲ್ಲಿದೆ

Karnataka Rains
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಬೇಸಿಗೆ ಮಳೆಯಾಗುತ್ತಿದೆ. ಆದರೆ ಇಂದು ಮಳೆಗೆ ಕೊಂಚ ಬ್ರೇಕ್ ಸಿಗಲಿದ್ದು ಇಂದಿನ ಹವಾಮಾನ ವರದಿ ಇಲ್ಲಿದೆ.

ರಾಜ್ಯದಲ್ಲಿ ಈಗ ಬಿಸಿಲು ಮತ್ತು ಮಳೆಯ ನಡುವೆ ಕಣ್ಣಾಮುಚ್ಚಾಲೆಯಾಗುತ್ತದೆ. ಕರಾವಳಿಯ ಕೆಲವು ಜಿಲ್ಲೆಗಳು, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯಾಗುತ್ತಿತ್ತು. ಆದರೆ ಇಂದು ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿಲ್ಲ.

ಹಾಗಿದ್ದರೂ ಕೊಡಗು, ಬೆಂಗಳೂರು, ಹಾಸನ, ಮೈಸೂರು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಉಳಿದ ಜಿಲ್ಲೆಗಳಲ್ಲಿ ಉರಿಬಿಸಿಲಿನ ವಾತಾವರಣ ಮುಂದುವರಿಯಲಿದೆ.

ಹಾಗಿದ್ದರೂ ಬೇಸಿಗೆ ಮಳೆಯಾಗಿದ್ದರಿಂದ ತಾಪಮಾನದಲ್ಲಿ ಕೊಂಚ ಇಳಿಕೆಯಾಗಿದ್ದು ರಾಜ್ಯದ ಗರಿಷ್ಠ ತಾಪಮಾನ ಇಂದು 33 ಡಿಗ್ರಿಯಷ್ಟು ಇರಲಿದೆ. ಕನಿಷ್ಠ ತಾಪಮಾನ 23 ಡಿಗ್ರಿಯಷ್ಟು ಕಂಡುಬರುವುದು. ರಾಯಚೂರಿನಲ್ಲಿ ಮಾತ್ರ ಗರಿಷ್ಠ ತಾಪಮಾನ 40 ಡಿಗ್ರಿ ತಲುಪಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೂರು ರಾಜ್ಯಗಳ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸಿದ ಪ್ರಧಾನಿ ಮೋದಿ: ಪೂರ್ತಿ ಭಾಷಣ ಇಲ್ಲಿದೆ