Select Your Language

Notifications

webdunia
webdunia
webdunia
webdunia

ಮೂರು ರಾಜ್ಯಗಳ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸಿದ ಪ್ರಧಾನಿ ಮೋದಿ: ಪೂರ್ತಿ ಭಾಷಣ ಇಲ್ಲಿದೆ

Modi BJP
Photo Credit: X
ಭಾರತ್ ಮಾತಾ ಕೀ ಜೈ..
ಇಂದಿನ ಈ ದಿನ ಐತಿಹಾಸಿಕವಾಗಿದೆ ಮತ್ತು ಅಭೂತಪೂರ್ವವಾಗಿದೆ. ವರ್ಷಗಳ ಪ್ರಾರ್ಥನೆ ನನಸಾದಾಗ ವಿಶೇಷ ಖುಷಿ ಸಿಗುತ್ತದೆ. ಇಂದು ದೇಶದ ಎಲ್ಲಾ ಬಿಜೆಪಿ ಕಾರ್ಯಕರ್ತರ ಮುಖದಲ್ಲಿ ಈ ಸಂತೋಷ ಕಾಣುತ್ತಿದೆ. ಒಬ್ಬ ಕಾರ್ಯಕರ್ತನಾಗಿರುವುದರ ಹೊರತಾಗಿ ನಾನು ಬಿಜೆಪಿಯ ಪ್ರತಿ ಕಾಋ್ಯಕರ್ತನ ಖುಷಿಯಲ್ಲಿ ಭಾಗಿಯಾಗುತ್ತಿದ್ದೇನೆ. ಗೆಳೆಯರೇ ಈ ಇಂದಿನ ದಿನ ಸ್ಮರಣೀಯವಾಗಿದೆ. ಇದು ದೇಶದ ಉಜ್ವಲ ಭವಿಷ್ಯದ ಉದ್ಘೋಷಣೆಯ ದಿನವಾಗಿದೆ. ಇದು ಭರವಸೆಯ ದಿನವಾಗಿದೆ. ಭರವಸೆ ಭಾರತದ ಮಹಾನ್ ಪ್ರಜಾಪ್ರಭುತ್ವದ್ದಾಗಿದೆ. ಭರವಸೆ ಕಾರ್ಯತಂತ್ರ ರಾಜಕೀಯದ್ದು, ಸಂಕಲ್ಪದ್ದು, ಏಕ ಭಾರತ ಶ್ರೇಷ್ಠ ಭಾರತದ್ದು. ನಾನು ಪಶ್ಚಿಮ ಬಂಗಾಲದ, ಪುದುಚೇರಿಯ ಜನತೆ, ತಮಿಳುನಾಡು, ಕೇರಳಂ ಜನತೆಯ ಆದರ ಪೂರ್ವಕ ವಂದನೆ ಸಲ್ಲಿಸುತ್ತೇನೆ. ನಾನು ಬಿಜೆಪಿಯ ಕೋಟಿ ಕೋಟಿ ಕಾರ್ಯಕರ್ತರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಮತ್ತೊಮ್ಮೆ ಕಮಾಲ್ ಮಾಡಿ ಕಮಲ ಅರಳಿಸಿದರು. ನೀವು ಹೊಸ ಇತಿಹಾಸ ರಚಿಸಿದ್ದೀರಿ. ಗೆಳೆಯರೇ, ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಶ್ರೀ ನಿತಿನ್ ನಬಿಯವರಿಗೆ ಅಧ್ಯಕ್ಷ ಪದವಿ ನೀಡಿದ ಬಳಿಕ ಇದು ಮೊದಲ ವಿಧಾನಸಭೆ ಚುನಾವಣೆಯಾಗಿತ್ತು ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವರ ಮಾರ್ಗದರ್ಶನ ಸಿಕ್ಕಿದೆ. ಇದು ಈ ಗೆಲುವಿಗೆ ಮುಖ್ಯ ಪಾತ್ರ ವಹಿಸಿತು.

ಎನ್ ಡಿಎಯ ಉಪಮುಖ್ಯಮಂತ್ರಿ ಸುನೇತ್ರಾ ಕೂಡಾ ಭರ್ಜರಿ ಗೆಲುವು ಸಾಧಿಸಿತು. ಈ ಎಲ್ಲಾ ರಾಜ್ಯಗಳ ಮತದಾರರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಜಯ, ಅಪಜಯ ಎನ್ನುವುದು ರಾಜಕೀಯದಲ್ಲಿ ಸಾಮಾನ್ಯ. ಆದರೆ ಐದು ರಾಜ್ಯಗಳ ಜನತೆ ಇಡೀ ಜಗತ್ತಿಗೆ ಇದು ನಮ್ಮ ಭಾರತ, ಪ್ರಜಾಪ್ರಭುತ್ವದ ತಾಯಿ ಎಂದು ಯಾಕೆ ಹೇಳುತ್ತಾರೆ ಎಂದು. ಪ್ರಜಾಪ್ರಭುತ್ವ ಎನ್ನುವುದು ನಮ್ಮ ಪಾಲಿಗೆ ಕೇವಲ ತಂತ್ರವಲ್ಲ. ಇದು ನಮ್ಮ ರಕ್ತದಲ್ಲಿ ಹರಿಯುತ್ತಿರುವ ಸಂಸ್ಕಾರವಾಗಿದೆ. ಇಂದು ಭಾರತ ಪ್ರಜಾಪ್ರಭುತ್ವ ಮಾತ್ರವಲ್ಲ, ಭಾರತದ ಸಂವಿಧಾನವೂ ಗೆದ್ದಿದೆ. ನಮ್ಮ ಸಂವಿಧಾನ ಸಂಸ್ಥೆಗಳು ಗೆದ್ದಿವೆ.

ಪಶ್ಚಿಮ ಬಂಗಾಲದಲ್ಲಿ 93% ಮತದಾನವಾಗುವುದು ಐತಿಹಾಸಿಕ ಎನಿಸಿದೆ. ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳಂನಲ್ಲಿ ಕೂಡಾ ದಾಖಲೆಯ ಮತದಾನವಾಗಿದೆ. ಇದರಲ್ಲೂ ಮಹಿಳೆಯರ ಪಾತ್ರ ದೊಡ್ಡದಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಅತೀ ದೊಡ್ಡ ಚಿತ್ರಣವಾಗಿದೆ. ಇಂದು ನಾನು ಚುನಾವಣಾ ಆಯೋಗದ ಎಲ್ಲಾ ಅಧಿಕಾರಿಗಳಿಗೆ, ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ.

ಭಾರತ ಪ್ರಜಾಪ್ರಭುತ್ವದ ಹಿರಿಮೆ ಎತ್ತಿಹಿಡಿಯಲು ನಿಮ್ಮೆಲ್ಲರ ಕೊಡುಗೆ ಇತಿಹಾಸ ಎಂದೆಂದೂ ನೆನೆಪಿನಲ್ಲಿಡುತ್ತದೆ. ಕಳೆದ ವರ್ಷ ನವಂಬರ್ 19 ಕ್ಕೆ ಬಿಹಾರ ಚುನಾವಣೆ ಫಲಿತಾಂಶ ಬಂದಾದ ನಾನು ಇದೇ ಜಾಗದಲ್ಲಿ ನಿಮಗೆ ಹೇಳಿದ್ದೆ, ಗಂಗಾ ಜೀ ಬಿಹಾರದಿಂದ ಹರಿದು ಗಂಗಾ ಸಾಗರ್ ವರೆಗೆ ಹೋಗುತ್ತದೆ. ಇಂದು, ಬಂಗಾಲದ ವಿಜಯದೊಂದಿಗೆ ಗಂಗೋತ್ರಿಯಿಂದ ಹಿಡಿದು ಗಂಗಾ ಸಾಗರ್ ವರೆಗೆ ಕಮಲವರಳಿದೆ.

ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ ಮತ್ತು ಈಗ ಪಶ್ಚಿಮ ಬಂಗಾಲ. ಇಂದು ಗಂಗಾ ಮಾತೆಯ ಆಶೀರ್ವಾದದಿಂದ ಈ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. 2013 ರಲ್ಲಿ ಭಾರತೀಯ ಜನತಾ ಪಾರ್ಟಿ ನನಗೆ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಕಾಶಿಗೆ ಹೋದಾಗ ಪತ್ರಕರ್ತರು ನನ್ನನ್ನು ಸುತ್ತುವರಿದಾಗ ಹೇಳಿದ್ದೆ, ಇಲ್ಲಿಗೆ ನನ್ನನ್ನು ಗಂಗಾ ಮಾತೆ ಕರೆಸಿದ್ದಾಳೆ ಎಂದು.

ಗಂಗಾ ಮಾತೆಯ ಆಶೀರ್ವಾದಿಂದ ನಾವು ನಿರಂತರ ಗೆಲುವು ಸಾಧಿಸುತ್ತಿದ್ದೇವೆ. ಅಸ್ಸಾಂ ಜನತೆ ಸತತವಾಗಿ ಮೂರನೇ ಬಾರಿಗೆ ಬಿಜೆಪಿ ಎನ್ ಡಿಎ ಮೇಲೆ ಭರವಸೆಯಿಟ್ಟಿದ್ದಾರೆ. ಇದು ಹ್ಯಾಟ್ರಿಕ್, ಮೂರನೇ ಬಾರಿಗೆ ಗೆದ್ದಿದ್ದೇವೆ. ಇದು ಅಸ್ಸಾಂ ಇತಿಹಾಸದಲ್ಲಿ ದೊಡ್ಡ ಘಟನೆಯಾಗಿದೆ.

2021 ರಲ್ಲಿ ನಾವು ಪುದುಚೇರಿಯ ಜನತೆಯ ಮುಂದೆ ಬೆಸ್ಟ್ ಪುದುಚೇರಿ ವಿಷನ್ ಇಟ್ಟಿದ್ದೆವು. ಪುದುಚೇರಿಯ ಜನತೆ ಆ ವಿಷನ್ ಮೇಲೆ ವಿಶ್ವಾಸವಿಟ್ಟು ಆಶೀರ್ವಾದ ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ನಮ್ಮ ಎನ್ ಡಿಎ ಸರ್ಕಾರ ಪೂರ್ತಿ ನಿಷ್ಠೆ ಮತ್ತು ದೂರದೃಷ್ಟಿಯಿಂದ ಈ ವಿಷನ್ ಪೂರ್ತಿ ಮಾಡಲು ಕೆಲಸ ಮಾಡಿದ್ದೆವು. ಅದಕ್ಕಾಗಿ ಪುದುಚೇರಿಯ ಜನತೆ ಇಂದು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ಇದಕ್ಕಾಗಿ ಪುದುಚೇರಿಯ ಯುವಜನತೆ, ಮೀನುಗಾರರಿಗೆ ಭರವಸೆ ನೀಡುತ್ತೇನೆ, ನಿಮ್ಮ ಭವಿಷ್ಯಕ್ಕಾಗಿ ಎನ್ ಡಿಎ ನಿರಂತರ ಕೆಲಸ ಮಾಡುತ್ತದೆ. ಪುದುಚೇರಿಯ ಪ್ರತಿ ಕುಟುಂಬದ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ.

ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಎನ್ ಡಿಎ ಸರ್ಕಾರವಿದೆ. ನಮ್ಮ ಮಂತ್ರವೆಂದರೆ ನಾಗರಿಕ ದೇವೋ ಭವ. ನಾವು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಅದಕ್ಕಾಗಿ ಜನತೆ ಬಿಜೆಪಿ ಮೇಲೆ ಭರವಸೆಯಿಡುತ್ತಿದೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ, ಎಲ್ಲಿ ಬಿಜೆಪಿಯಿದೆಯೋ ಅಲ್ಲಿ ಉತ್ತಮ ಆಡಳಿತವಿದೆ, ವಿಕಾಸವಿದೆ.

ನೀವು ಕಳೆದ ಎರಡು ವರ್ಷಗಳ ಟ್ರೆಂಡ್ ನೋಡಿ ಹರ್ಯಾಣದಲ್ಲಿ, ಮಹಾರಾಷ್ಟ್ರ, ದೆಹಲಿ, ಬಿಹಾರದಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಇದು ಕೇವಲ ರಾಜ್ಯ ಚುನಾವಣೆಯಲ್ಲಿ ಸಿಕ್ಕಿದ್ದಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಸಿಕ್ಕಿದೆ. ಎರಡು ದಿನಗಳ ಹಿಂದೆ ಗುಜರಾತ್ ಲೋಕಲ್ ಚುನಾವಣೆ ಫಲಿತಾಂಶ ಬಂದಿತ್ತು. ಅಲ್ಲಿ ಬಿಜೆಪಿ 2 ದಶಕಗಳಿಂದ ಜನರ ಸೇವೆ ಮಾಡುತ್ತಿದೆ. ಅಲ್ಲಿನ ಜನತೆ ಬಿಜೆಪಿಗೆ ಆಶೀರ್ವಾದದ ದಾಖಲೆ ಮಾಡಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚು ವೋಟ್ ಶೇರಿಂಗ್ ಸಿಕ್ಕಿದೆ. ಇದು ಬಿಜೆಪಿಯ ಯಶಸ್ಸಿಗೆ ಉದಾಹರಣೆಯಾಗಿದೆ.

ಇಂದು ಬಿಜೆಪಿಯ ಕಾರ್ಯಕರ್ತನಾಗಿ ಪದೇ ಪದೇ ಒಂದು ಮಾತು ನೆನಪಾಗುತ್ತಿದೆ. ಡಾ ಶ್ಯಾಮ ಪ್ರಸಾದ್ ಮುಖರ್ಜಿಯವರ ಆತ್ಮಕ್ಕೆ ಇಂದು ಎಷ್ಟು ಶಾಂತಿ ಸಿಕ್ಕಿರಬಹುದು. ಅವರು 1951 ರಲ್ಲಿ ಸಂದೇಶ ನೀಡಿದ್ದರು. ದೇಶಕ್ಕಾಗಿ ಜೀವನ ಮಾಡಬೇಕು, ದೇಶಕ್ಕಾಗಿ ಸಾಯಬೇಕು. ಅವರು ತಮ್ಮ ಜೀವನದ ಮೂಲಕ ನಿರೂಪಿಸಿದರು. ರಾಷ್ಟ್ರಕ್ಕಾಗಿ ತಮ್ಮ ಜೀವ ಮುಡಿಪಾಗಿಡಲು ಅರೆಕ್ಷಣವೂ ಯೋಚನೆ ಬೇಡ.

ಅವರು ಪಶ್ಚಿಮ ಬಂಗಾಲವನ್ನು ದೇಶದ ಭಾಗವಾಗಿಸಲು ದೊಡ್ಡ ಹೋರಾಟ ಮಾಡಿದ್ದರು. ಅವರು ಸಮೃದ್ಧ ಬಂಗಾಲದ ಕನಸು ಕಂಡಿದ್ದರು, ಆದರೆ ಆ ಕನಸು ನನಸಾಗಲು ಇಷ್ಟು ವರ್ಷ ಕಾಯಬೇಕಾಯಿತು. ಇಂದು ಮೇ 4 ರಂದು 2026 ರಂದು ಬಂಗಾಲದ ಜನತೆ ನಾವು ಬಿಜೆಪಿ ಕಾರ್ಯಕರ್ತರಿಗೆ ಆ ಅವಕಾಶ ನೀಡಿದರು. ಗೆಳೆಯರೇ, ಬಂಗಾಲದಲ್ಲಿ ಇಂದಿನಿಂದ ಹೊಸ ಅಧ್ಯಾಯ ಶುರುವಾಗಿದೆ.

ಇಂದಿನಿಂದ ಬಂಗಾಲ ಭಯಮುಕ್ತವಾಗಿದೆ. ಗೆಳೆಯರೇ ಈ ಗೆಲುವಿನೊಂದಿಗೆ ವಂದೇ ಮಾತರಂನ 150 ನೇ ವರ್ಷದಲ್ಲಿ ಭಾರತ್ ಮಾತೆಗೆ, ಬಂಕಿಮ್ ಚಂದ್ರರಿಗೆ ಬಂಗಾಲದ ಜನತೆ ತಮ್ಮ ಪ್ರಣಾಮ ವ್ಯಕ್ತಪಡಿಸಿದ್ದಾರೆ. ಯೋಗಿನಾಥ ಅರವಿಂದ್ ಅವರಿಗೂ ಮತದಾರರು ಐತಿಹಾಸಿಕ ಶ್ರದ್ಧಾಂಜಲಿ ನೀಡಿದ್ದಾರೆ. ಬಂಗಾಲದ ಅಷ್ಟೊಂದು ಕಾರ್ಯಕರ್ತರೂ ತಮ್ಮ ಜೀವನವನ್ನು ಈ ಗೆಲುವಿಗೆ ಮುಡಿಪಾಗಿಟ್ಟಿದ್ದರು. ಬಿಜೆಪಿಯ ಮಹಿಳಾ ಕಾರ್ಯಕರ್ತರಿಗೆ ಸಾಕಷ್ಟು ತೊಂದರೆ ಎದುರಿಸಬೇಕಾಯಿತು.

ನಿಮಗೆ ಕಲ್ಪನೆ ಮಾಡಲು ಸಾಧ್ಯವಿಲ್ಲ. ಕೇರಳ ಮತ್ತು ಬಂಗಾಲದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರಿಗೆ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಇಂದು ಬಂಗಾಲದಲ್ಲಿ ಬಿಜೆಪಿಯ ಯಶಸ್ಸು ಇಂತಹ ಕಾರ್ಯಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ನೀಡುತ್ತೇನೆ. ನಾನು ಈ ಗೆಲುವನ್ನು ಬಂಗಾಲದ ಜನತೆಗೆ ಅರ್ಪಿಸುತ್ತೇನೆ. ಗೆಳೆಯರೇ, ಇಂದು ಮೇ 4 ರಂದು ಹೊಸ ಸೂರ್ಯನ ಉದಯವಾಗಿದೆ.

ಇಂಥಾ ಬೆಳಗಿಗಾಗಿ ನಾವು ತಲೆಮಾರಿನಿಂದ ಕಾಯುತ್ತಿದ್ದೆವು. ಬಿಜೆಪಿ ಎಷ್ಟು ಸೀಟು ಗೆದ್ದಿದೆ ಅದು ಕೇವಲ ಸಂಖ್ಯೆಯಲ್ಲ. ಇದು ವಿಶ್ವಾಸದ ಹೂಂಕಾವಾಗಿದೆ. ಭಯ, ತುಷ್ಠೀಕರಣ ರಾಜಕಾರಣವನ್ನು ಕಿತ್ತೊಗೆದ ವಿಶ್ವಾಸದ ಹೂಂಕಾರವಾಗಿದೆ. ಗೆಳೆಯರೇ, ಇಂದಿನಿಂದ ಬಂಗಾಲದಲ್ಲಿ ಭವಿಷ್ಯದ ವಿಕಾಸದ, ವಿಶ್ವಾಸ ಮತ್ತು ಹೊಸ ಭರವಸೆಯ ಯಾತ್ರೆ ಶುರುವಾಗಿದೆ. ಇಂದು ಪ್ರತೀ ಬಂಗಾಲ ಜನತೆಗೆ ಭರವಸೆ ನೀಡುತ್ತಿದ್ದೇನೆ, ಬಂಗಾಲದ ಉಜ್ವಲ ಭವಿಷ್ಯಕ್ಕೆ ಬಿಜೆಪಿ ದಿನ ರಾತ್ರಿ ಒಂದು ಮಾಡುತ್ತದೆ. ಬಂಗಾಲದಲ್ಲಿ ಇನ್ನು ಮಹಿಳೆಯರ ಸುರಕ್ಷತೆಯ ಭರವಸೆ ಸಿಗಲಿದೆ. ಯುವವಕರಿಗೆ ಉದ್ಯೋಗ ಸಿಗಲಿದೆ. ಮೊದಲ ಕ್ಯಾಬಿನೆಟ್ ನಲ್ಲೇ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಿದ್ದೇವೆ.

ಬಿಜೆಪಿ ಬಂಗಾಲದಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಿ ತೋರಿಸಲಿದೆ. ಇದು ಮೋದಿ ಗ್ಯಾರಂಟಿ. ಬಂಗಾಲದ ಈ ಚುನಾವಣೆ ಒಂದು ರೀತಿಯಲ್ಲಿ ಹೃದಯಕ್ಕೆ ಹತ್ತಿರವಾದುದು. ಬಂಗಾಲದ ಚುನಾವಣೆ ಸಂದರ್ಭದಲ್ಲೇ ಹಿಂಸೆ, ಭಯ, ನಿರ್ದೋಷಿ ಜನರ ಮೇಲೆ ದೌರ್ಜನ್ಯದ ಸುದ್ದಿ ಬರುತ್ತದೆ. ಆದರೆ ಪಶ್ಚಿಮ ಬಂಗಾಲದಲ್ಲಿ ಶಾಂತಿಯುತ ಮತದಾನವಾದ ಸುದ್ದಿ ಬಂತು. ಮೊದಲ ಬಾರಿಗೆ ಒಬ್ಬನೇ ಒಬ್ಬ ನಿರ್ದೋಷಿ ನಾಗರಿಕನ ಜೀವ ಹೋಗಿಲ್ಲ. ಮೊದಲ ಬಾರಿಗೆ ಜನತಾ ಜನಾರ್ಧನನ ಸದ್ದು ಕೇಳಿಸಿತು. ಮೊದಲ ಬಾರಿಗೆ ಪ್ರಜಾಪ್ರಭುತ್ವ ಗೆದ್ದಿದೆ.

ಇಂದು ಬಂಗಾಲ ಪರಿವರ್ತನೆಯ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ. ಇಂದು ಬಂಗಾಲದ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಗ್ರಹಪಡಿಸುತ್ತೇನೆ, ಬಂಗಾಲದಲ್ಲಿ ಕಳೆದ ಕೆಲವು ದಶಕಗಳಿಂದ ರಾಜನೀತಿ ಹಿಂಸೆಯಿಂದ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂದಿನಿಂದ ಬಂಗಾಲದ ಮೇಲಿನ ಈ ಕಪ್ಪು ಚುಕ್ಕೆ ಬದಲಾಗಬೇಕಿದೆ. ಇಂದು ಬಿಜೆಪಿ ಗೆದ್ದಿದೆ, ಆದರೆ ಬದಲಾವಣೆಯ ಮಾತು ಬರಬೇಕು, ಭಯವಲ್ಲ ಭವಿಷ್ಯದ ಮಾತು ಕೇಳಿಬರಬೇಕು. ಎಲ್ಲಾ ರಾಜಕೀಯ ಪಕ್ಷಗಳೂ ಈ ಹಿಂಸಾತ್ಮಕ ಚಕ್ರವನ್ನು ಎಂದೆಂದಿಗೂ ಮುಗಿಸೋಣ. ಬಂಗಾಲದ ಸೇವೆಗಾಗಿ ಕೆಲಸ ಮಾಡೋಣ.

ಈ ರಾಜ್ಯಗಳ ಚುನಾವಣೆ ಫಲಿತಾಂಶವನ್ನು ರಾಜನೀತಿ ತಜ್ಞರು ತಮ್ಮದೇ ರೀತಿಯಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ಹೊರತಾಗಿಯೂ ಇವುಗಳ ಟೈಮಿಂಗ್ ಮುಖ್ಯವಾಗಿದೆ. ನೀವು ನೋಡಿದ್ದೀರಿ, ಈ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ಆಗುವಾಗ ವಿಶ್ವದ ಅನೇಕ ರಾಜ್ಯಗಳಲ್ಲಿ ಯುದ್ಧದ ಸೈರನ್ ಮೊಳಗುತ್ತಿತ್ತು. ಆರ್ಥಿಕ ಸಂಕಷ್ಟವಿತ್ತು. ಆ ಸಂದರ್ಭದಲ್ಲಿ ಭಾರತದ ಜನತೆ ಮತದಾನ ಮಾಡುತ್ತಿದ್ದರು.

ಇಂದು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಕಷ್ಟ ಇಡೀ ವಿಶ್ವವನ್ನೇ ನಲುಗಿಸಿದೆ. ಆದರೆ ಭಾರತ ಸಂಪೂರ್ಣ ಸಾಮರ್ಥ್ಯದೊಂದಿಗೆ ಈ ಸಂಕಷ್ಟವನ್ನು ಎದುರಿಸುತ್ತಿದೆ. ಇದು ಈ ಚುನಾವಣೆಯಲ್ಲೂ ಕಂಡುಬಂದಿದೆ. ಜನ ವಿಕಸಿತ ಭಾರತ ಎನ್ನುವ ಸಂಕಲ್ಪದೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.

ಭಾರತ ಸಮೃದ್ಧವಾಗಿದ್ದಾಗ, ಆರ್ಥಿಕ, ರಾಜನೀತಿಯ ಉತ್ತುಂಗದಲ್ಲಿದ್ದಾಗ ಮೂರು ಸ್ತಂಬಗಳಿದ್ದವು. ಅಂಗ, ವಂಗಾ ಮತ್ತು ಕಲಿಂಗವಿತ್ತು. ಕಲಿಂಗ ಇಡೀ ಏಷ್ಯಾಗೆ ಉತ್ಪನ್ನಗಳನ್ನು ತಲುಪಿಸುತ್ತಿತ್ತು. ನಲಂದಾ ವಿಶ್ವವಿದ್ಯಾಲಯಗಳ ತವರಾಗಿತ್ತು.

ಗೆಳೆಯರೇ ಗುಲಾಮತೆಯ ದಾಸನಾಗಿದ್ದರಿಂದ ಸಮೃದ್ಧ ಭಾರತ ಕ್ಷೀಣಿಸುತ್ತಾ ಬಂತು. ಹೀಗಾಗಿ ಈ ವಿಕಸಿತ ಭಾರತಕ್ಕಾಗಿ ಈ ಮೂರು ಸ್ತಂಬಗಳ ಅಭಿವೃದ್ಧಿ ಮುಖ್ಯವಾಗಿದೆ. ಅಂಗ, ವಂಗ ಮತ್ತು ಕಲಿಂಗ ಮೂರೂ ಪ್ರದೇಶಗಳು ವಿಕಸಿತ ಭಾರತಕ್ಕಾಗಿ ಬಿಜೆಪಿಯನ್ನು ಆಯ್ಕೆ ಮಾಡಿದೆ.

ವಿಕಸಿತ ಭಾರತದ ಮುಖ್ಯ ಶಕ್ತಿ ಎಂದರೆ ಭಾರತದ ನಾರಿ ಶಕ್ತಿ. ಆದರೆ ನಾರಿಶಕ್ತಿಯ ಮುನ್ನಡೆಯನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ತಡೆಯುವ ಯತ್ನ ಮಾಡಿದವು. ನಾರಿಶಕ್ತಿ ವಂದನಾ ನಿರ್ಣಯ ಯಶಸ್ವಿಯಾಗಲು ಬಿಡಲಿಲ್ಲ. ಇದಕ್ಕಾಗಿಯೇ ಅಂದು ಹೇಳಿದ್ದೆ, ಮಹಿಳೆಯರ ಸುರಕ್ಷತೆಯನ್ನು ವಿರೋಧಿಸುವವರು ಇಂಥಾ ಸೋಲು ಅನುಭವಿಸಬೇಕಾಗುತ್ತದೆ ಎಂದಿದ್ದೆ. ಇಂದು ಡಿಎಂಕೆ, ಕಾಂಗ್ರೆಸ್, ಟಿಎಂಸಿಗೆ ಮಹಿಳೆಯರು ಅಂಥಾ ಏಟು ನೀಡಿದ್ದಾರೆ.

ಕೇರಳಂನಲ್ಲಿ ಎಡರಂಗದ ಕೆಟ್ಟ ಆಡಳಿತ ಕಾಂಗ್ರೆಸ್ ಗೆ ಸಿಕ್ಕಿದೆ. ಆದರೆ ಕೇರಳದ ಮಹಿಳೆಯರೂ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ. ಗೆಳೆಯರೇ ಸಮಾಜವಾದಿ ಪಕ್ಷವೂ ಸಂಸತ್ ನಲ್ಲಿ ಮಹಿಳೆಯರ ಬಿಲ್ ತಡೆದರು. ಇವರು ಉತ್ತರ ಪ್ರದೇಶದ ಮಹಿಳೆಯರ ವಿರೋಧ ಎದುರಿಸಬೇಕಾಗುತ್ತದೆ.

ಜನ ಇಂದು ಬಿಜೆಪಿ ಮುಖಾಂತರ ದೊಡ್ಡ ಬದಲಾವಣೆ ಎದುರು ನೋಡುತ್ತಿದ್ದಾರೆ. ಇಂದು ದೇಶದ ಯಾವುದೇ ರಾಜ್ಯದಲ್ಲಿ ಕಮ್ಯುನಿಷ್ಟ್ ಸರ್ಕಾರವಿಲ್ಲ. ಇದು ಯೋಚನೆಯ ಬದಲಾವಣೆಯ ಫಲವಾಗಿದೆ. ಇದು ವಿಕಸಿತ ಭಾರತ ಈ ದಿಶೆಯನ್ನು ಮುಂದುವರಿಯಬೇಕು ಎಂದು ಸೂಚಿಸುತ್ತದೆ. ಭಾರತ ಇಂದು ಅವಕಾಶ, ವಿಕಾಸ, ವಿಶ್ವಾಸ, ಪ್ರಗತಿ, ಸ್ಥಿರತೆ ಬಯಸುತ್ತಿದೆ. ದೇಶವನ್ನು ಮುನ್ನಡೆಸುವ ರಾಜಕಾರಣ ಬಯಸುತ್ತಿದೆ.

ಆದರೆ ದುರದೃಷ್ಟವಶಾತ್ ಇಂದಿನ ಕಾಂಗ್ರೆಸ್ ಇದರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ಇಂತಹ ಸಮಯದಲ್ಲಿ ಇಡೀ ದೇಶ ಕಮ್ಯುನಿಸಂನ್ನು ದೂರ ಮಾಡಿದ್ದಾರೆ, ಕಾಂಗ್ರೆಸ್ ಅದೇ ವಿಚಾರಧಾರೆಯನ್ನು ತನ್ನದಾಗಿಸಲು ಯತ್ನಿಸಿತ್ತು. ಅದನ್ನು ಜನ ತಡೆದಿದ್ದಾರೆ.

ಇದಕ್ಕಾಗಿ ಕಾಂಗ್ರೆಸ್ ಅರ್ಬನ್ ನಕ್ಸಲರ ದಾಳವಾಗಿದೆ. ಕಾಂಗ್ರೆಸ್ ಒಂದನ್ನು ಮರೆಯಬಾರದು, ಯಾವ ವಿಚಾರಧಾರೆಯನ್ನು ತನ್ನದಾಗಿಸಿಕೊಂಡಿದೆಯೋ ಅದನ್ನು ಜನ ತಿರಸ್ಕರಿಸುತ್ತಾರೆ. ಇಂದು ದೇಶದ ಪ್ರತೀ ರಾಜ್ಯಗಳು ಪರಸ್ಪರ ಹೊಡೆದಾಡಿಕೊಂಡು ಅಲ್ಲ, ಸಹಕಾರದೊಂದಿಗೆ ಮುನ್ನಡೆಯಲು ಬಯಸುತ್ತದೆ. ಈ ಚುನಾವಣೆ ಆ ಸಂದೇಶ ನೀಡಿದೆ.

ಕೆಲವೊಮ್ಮೆ ಭಾಷೆ ಹೆಸರಿನಲ್ಲಿ, ಆಹಾರದ ವಿಚಾರದಲ್ಲಿ, ದೇಶದ ಜನರನ್ನೇ ದೂಷಿಸುವವರಿಗೆ ಇವರ ಒಡದು ಆಳುವ ನೀತಿ ಮುಂದುವರಿದಿತ್ತು. ಆದರೆ ಈ ಚುನಾವಣೆ ನಮಗೆ ವಿಭಜನೆ ಅಲ್ಲ ವಿಕಾಸ ಬೇಕು ಎಂದು ಜನ ಸಂದೇಶ ನೀಡಿದ್ದಾರೆ.

 
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ದೇಶದ ಪ್ರತೀ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಆದರೆ ಸ್ವಾತಂತ್ರ್ಯ ಹೋರಾಟದ ಭಾವನಾತ್ಮಕ ಸನ್ನಿವೇಶದಿಂದ ಹೊರಬಂದ ಬಳಿಕ ಜನರಿಗೆ ಕಾಂಗ್ರೆಸ್ ನ ನಿಜ ರೂಪ ಗೊತ್ತಾಯಿತು. ಕಾಂಗ್ರೆಸ್ ದೇಶದ ಸಂಸ್ಕೃತಿ, ಸಂವೇದನೆ ಅರಿಯಲಿಲ್ಲ. ಬಿಜೆಪಿಗೆ ಭಾರತ ಮತ್ತು ಭಾರತೀಯತೆಗಿಂತ ದೊಡ್ಡದು ಯಾವುದೂ ಇಲ್ಲ. ನಮಗೆ ಭಾರತ ಎಂದರೆ ಎಲ್ಲವೂ ಆಗಿದೆ. ಇದಕ್ಕಾಗಿ ಬಿಜೆಪಿ ಜನರ ಆಶೀರ್ವಾದ ಪಡೆಯುತ್ತಿದೆ.

ತಮಿಳುನಾಡು ಜನತೆ ಹೊಸ ಪ್ರಯೋಗ ಮಾಡಿದ್ದಾರೆ. ನಾನು ಯುಡಿಎಫ್ ಗೂ ಅಭಿನಂದನೆ ಸಲ್ಲಿಸುತ್ತೇನೆ. ನಾನು ಕೇರಳ ಮತ್ತು ತಮಿಳುನಾಡು ಜನರಿಗೂ ಭಾರತ ಸರ್ಕಾರ ಈ ರಾಜ್ಯಗಳ ಅಭಿವೃದ್ಧಿಗೆ ಹೆಗಲು ಕೊಟ್ಟು ನಡೆಯಲಿದೆ ಎಂದು ಭರವಸೆ ನೀಡುತ್ತೇನೆ. ಭಾರತ್ ಮಾತಾ ಕೀ.. ಜೈ..

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‍ಗೆ ಭವಿಷ್ಯವಿಲ್ಲ: ಬಿ.ಎಸ್.ಯಡಿಯೂರಪ್ಪ