Select Your Language

Notifications

webdunia
webdunia
webdunia
webdunia

Karnataka Weather: ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ವರುಣಾರ್ಭಟ

Karnataka Rains
ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಬೇಸಿಗೆ ಮಳೆಯ ಅಬ್ಬರ ಕಂಡುಬರುತ್ತಿದೆ. ಇಂದೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದ್ದು, ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ಮಳೆ ಇಲ್ಲಿದೆ ವಿವರ.

ಕಳೆದ ಎರಡು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಬಿರು ಬೇಸಿಗೆಯ ನಡುವೆ ವರುಣ ಕೊಂಚ ಮಟ್ಟಿಗೆ ತಂಪು ನೀಡಿದ್ದಾನೆ. ಹಾಗಿದ್ದರೂ ಮಳೆಯಿಂದ ಆದ ಅನಾಹುತಗಳು ಜನ ಜೀವನಕ್ಕೆ ತೊಂದರೆ ನೀಡಿದೆ.

ಇಂದೂ ಕೂಡಾ ಬೆಂಗಳೂರಿನಲ್ಲಿ ಮಳೆಯ ಸೂಚನೆಯಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಇಂದು ಬೆಂಗಳೂರಿನ ಹೊರತಾಗಿ ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು, ಕೊಡಗು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆಯ ಸಾಧ್ಯತೆಯಿದೆ.

ಉಳಿದ ಜಿಲ್ಲೆಗಳಲ್ಲಿ ಇಂದು ಉರಿಬಿಸಿಲಿನ ವಾತಾವರಣ ಮುಂದುವರಿಯಲಿದೆ. ರಾಯಚೂರು, ಬಳ್ಳಾರಿಯಲ್ಲಿ ಇಂದು ಗರಿಷ್ಠ ತಾಪಮಾನ 40 ಡಿಗ್ರಿ ತಲುಪಲಿದೆ. ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತಗಟ್ಟೆ ಸಮೀಕ್ಷೆ ಉಲ್ಟಾ ಆಗಲಿದೆ: ಟಿಎಂಸಿಗೆ ಭರ್ಜರಿ ಜಯ ಖಚಿತ ಎಂದ ಮಮತಾ ಬ್ಯಾನರ್ಜಿ