Select Your Language

Notifications

webdunia
webdunia
webdunia
webdunia

Karnataka Weather: ಈ ವಾರ ಮಳೆ ಇನ್ನಷ್ಟು ಬಿರುಸು, ಯಾವ ಜಿಲ್ಲೆಗಳಲ್ಲಿ ಮಳೆ ಇಲ್ಲಿದೆ ವಿವರ

Karnataka Rains
ಬೆಂಗಳೂರು: ಕಳೆದ ವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಈ ವಾರ ಮತ್ತಷ್ಟು ಮಳೆಯಾಗಲಿದ್ದು, ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಇಲ್ಲಿದೆ ಈ ವಾರದ ಹವಾಮಾನ ವರದಿ.

ಮೇ ತಿಂಗಳ ಆರಂಭದಲ್ಲಿ ಸಾಮಾನ್ಯವಾಗಿ ರಾಜ್ಯದಲ್ಲಿ ಬಿಸಿಲು ತಾಂಡವವಾಡುತ್ತಿರುದೆ. ಈ ಬಾರಿ ಬಿರು ಬಿಸಿಲಿದ್ದರೂ ಇದರ ಜೊತೆಗೆ ಕೆಲವು ಕಡೆ ಮಳೆ ಬಂದು ತಂಪಾಗುತ್ತಿದೆ. ಕಳೆದ ವಾರ ಬೆಂಗಳೂರಿನಲ್ಲಿ ಸುರಿದ ಮಳೆಗೆ 10 ಜನ ಬಲಿಯಾಗಿದ್ದರು.

ಈ ವಾರಂತ್ಯದವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ಬೆಳಗಾವಿ, ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ ಈ ವಾರ ಮಳೆಯಾಗುವ ಸಾಧ್ಯತೆಯಿದೆ.

ಉಳಿದ ಜಿಲ್ಲೆಗಳಲ್ಲಿ ಉರಿಬಿಸಿಲು ಅಥವಾ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಈ ವಾರ ರಾಜ್ಯದ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡುಬರುವುದು. ಗರಿಷ್ಠ ತಾಪಮಾನ ಸರಾಸರಿ 32-33 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ 2026: ಯಾರಿಗೆ ಜಯ