Select Your Language

Notifications

webdunia
webdunia
webdunia
webdunia

Karnataka Weather: ಈ ವರ್ಷ ಮಳೆಗಾಲ ಯಾವಾಗ ಆರಂಭ: ಇಲ್ಲಿದೆ ಉತ್ತರ

Karnataka Rain
ಬೆಂಗಳೂರು: ಸತತ ಉರಿಬಿಸಿಲಿನಿಂದ ತತ್ತರಿಸಿದ್ದವರಿಗೆ ಭಾರತೀಯ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ. ಈ ವರ್ಷ ಮಳೆಗಾಲ ಯಾವಾಗ ಆರಂಭವಾಗಲಿದೆ ಎಂದು ತಿಳಿಸಿದೆ.

ಈ ಬಾರಿ ಬಿಸಿಲು ವಾಡಿಕೆಗಿಂತ ಮೊದಲೇ ನೆತ್ತಿ ಸುಡಲು ಆರಂಭವಾಗಿತ್ತು. ಫೆಬ್ರವರಿಯಲ್ಲೇ ಗರಿಷ್ಠ ತಾಪಮಾನ ಕೆಲವು ಭಾಗಗಳಲ್ಲಿ 35 ಡಿಗ್ರಿ ದಾಟಿದ್ದೂ ಇದೆ. ಹೀಗಾಗಿ ಜನ ಮಳೆಗಾಲ ಆರಂಭವಾದರೆ ಸಾಕು ಎನ್ನುವಂತಾಗಿದೆ.

ಇದರ ನಡುವೆ ಭಾರತೀಯ ಹವಾಮಾನ ಇಲಾಖೆ ಈ ವರ್ಷ ಬೇಗನೇ ಮಳೆಗಾಲ ಆರಂಭವಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಹವಾಮಾನ ವರದಿಗಳ ಪ್ರಕಾರ ಈ ವರ್ಷ ಮೇ 14 ರಿಂದ 16 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನೈಋತ್ಯ ಮಾನ್ಸೂನ್ ಆಗಮನವಾಗುವ ಸಾಧ್ಯತೆಯಿದೆ.

ಮೇ ತಿಂಗಳಿನಲ್ಲಿ ಈ ಬಾರಿ ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಆದರೆ ಪೂರ್ವ, ಮಧ್ಯ, ಈಶಾನ್ಯ ಭಾರತದಲ್ಲಿ ಕೊಂಚ ಮಳೆ ಕಡಿಮೆಯಿರುವ ಸಾಧ್ಯತೆಯಿದೆ. ಆದರೆ ಮಧ್ಯಭಾರತದ ಕೆಲವು ಭಾಗಗಳು, ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಸಾಧ್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಬದಿ ಕೂತು ತರಕಾರಿ ಮಾರುತ್ತಿದ್ದ ಬಡ ಮಕ್ಕಳಿಗೆ ಹೀಗೆ ಮಾಡೋದಾ: ಕಣ್ಣೀರೇ ಬರುತ್ತೆ Video