Publish Date: Fri, 17 Apr 2026 (09:19 IST)
Updated Date: Fri, 17 Apr 2026 (09:22 IST)
ಬೆಂಗಳೂರು: ಮುಸ್ಲಿಂ ನಾಯಕರನ್ನು ಹೀಗೆ ಒಬ್ಬರಾದ ಮೇಲೊಬ್ಬರಂತೆ ಕಿತ್ತಾಕುತ್ತಿದ್ದರೆ ಆ ಸಮುದಾಯದ ನಾಯಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ.
ದಾವಣಗೆರೆ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂ ನಾಯಕರು ಅಸಹಕಾರ ತೋರಿದ್ದಕ್ಕೆ ಹೈಕಮಾಂಡ್ ಈಗಾಗಲೇ ಇಬ್ಬರು ಮುಸ್ಲಿಂ ಸಮುದಾಯದ ನಾಯಕರನ್ನು ಅವರ ಹುದ್ದೆಯಿಂದ ವಜಾಗೊಳಿಸಿದೆ. ಇದರ ಜೊತೆಗೆ ಸಚಿವ ಜಮೀರ್ ಅಹ್ಮದ್ ಮೇಲೂ ತೂಗುಗತ್ತಿಯಿದೆ.
ಜಮೀರ್ ಅಹ್ಮದ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕ. ಅವರನ್ನು ಸಚಿವ ಸ್ಥಾನಗಳಿಂದ ವಜಾಗೊಳಿಸಲಾಗುತ್ತದೆ ಎಂಬ ವರದಿಗಳ ಬೆನ್ನಲ್ಲೇ ಮುಸ್ಲಿಂ ನಾಯಕರು ಬಹಿರಂಗವಾಗಿ ಕಿಡಿ ಕಾರಿದ್ದರು. ಇದೀಗ ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯದವರನ್ನು ಈ ರೀತಿ ಟಾರ್ಗೆಟ್ ಮಾಡುತ್ತಿರುವ ಪಕ್ಷದ ನಿಲುವನ್ನು ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಹೀಗೇ ಮುಂದುವರಿದರೆ ಮುಸ್ಲಿಂ ಸಮುದಾಯದ ವಿಶ್ವಾಸವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಬ್ದುಲ್ ಜಬ್ಬಾರ್ ಮೇಲೆ ಕೈಗೊಂಡಿದ್ದು ಅವಸರದ ಕ್ರಮ. ಇದರಿಂದ ಆ ಸಮುದಾಯವೇ ನಮ್ಮನ್ನು ಪ್ರಶ್ನಿಸುವಂತೆ ಮಾಡಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಾಗ್ವಾದ ಜೋರಾಗಿಯೇ ನಡೆದಿದೆ. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಎಸ್ಎಸ್ ಮಲ್ಲಿಕಾರ್ಜುನ ಸಭೆಯಿಂದಲೇ ಹೊರನಡೆದರು ಎಂದು ತಿಳಿದುಬಂದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ