Publish Date: Thu, 16 Apr 2026 (10:56 IST)
Updated Date: Thu, 16 Apr 2026 (10:58 IST)
ಬೆಂಗಳೂರು: ಹೈಕಮಾಂಡ್ ನಿಂದ ಪದಚ್ಯುತಿಗೆ ಸೂಚನೆ ಬಂದಿದೆ ಎಂಬ ವದಂತಿಗಳ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳ ಮುಂದೆ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.
ದಾವಣಗೆರೆ ಬೈ ಎಲೆಕ್ಷನ್ ಬಂಡಾಯದ ದಳ್ಳುರಿ ಈಗ ಕಾಂಗ್ರೆಸ್ ನಲ್ಲಿ ಜೋರಾಗುತ್ತಿದೆ. ದಾವಣಗೆರೆಯಲ್ಲಿ ಪಕ್ಷ ಬೆಂಬಲಿಸದ ಅಲ್ಪಸಂಖ್ಯಾತ ಸಮುದಾಯದ ನಾಯಕರ ತಲೆದಂಡವಾಗುತ್ತಿದೆ. ಈಗಾಗಲೇ ಎಂಎಲ್ ಸಿ ನಸೀರ್ ಅಹ್ಮದ್, ಜಬ್ಬಾರ್ ತಲೆದಂಡವಾಗಿದೆ.
ಇದೀಗ ಸಚಿವ ಜಮೀರ್ ಅಹ್ಮದ್ ಗೂ ಕೊಕ್ ಕೊಡಲು ಹೈಕಮಾಂಡ್ ನಿಂದ ಒತ್ತಡವಿದೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕೂಡಾ ಜಮೀರ್ ರನ್ನು ಕರೆಸಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದರ ನಡುವೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಹಣೆಬರಹವನ್ನು ನಂಬುತ್ತೇನೆ. ಅದನ್ನು ದೇವರು ಬರೆದಿರುತ್ತಾನೆ. ಬೇರೆ ಯಾರೂ ಬರೆಯಲು ಸಾಧ್ಯವಿಲ್ಲ. ನಾನು ನೊಂದಿಲ್ಲ, ಬೆಂದಿಲ್ಲ, ಗಟ್ಟಿಯಾಗಿದ್ದೇನೆ. ನನ್ನ ಮೇಲೆ ಯಾವ ಒತ್ತಡವೂ ಇಲ್ಲ. ಯಾವ ಮೋಜು ಮಸ್ತಿ ಮಾಡಲು ಕೇರಳಕ್ಕೆ ಹೋಗಿರಲಿಲ್ಲ. ದಾವಣಗೆರೆಗಿಂತ ಕೇರಳದಲ್ಲಿ ನನ್ನ ಅವಶ್ಯಕತೆ ಇದೆ ಎಂದು ಕೆಸಿ ವೇಣುಗೋಪಾಲ್ ಅವರು ಕರೆ ಮಾಡಿ ಹೇಳಿದ್ದರಿಂದ ಅಲ್ಲಿಗೆ ಹೋಗಿದ್ದೆ. ಪಕ್ಷ ಕೊಟ್ಟ ಜವಾಬ್ಧಾರಿ ನಿಭಾಯಿಸಿದ್ದೇನೆ. ಶಿಸ್ತು ಮುಖ್ಯ, ಅದನ್ನು ನಿಭಾಯಿಸಿದ್ದೇನೆ. ನಾನೆಲ್ಲಾದರೂ ತಪ್ಪಿಸಿಕೊಂಡು ಹೋಗಿದ್ದೇನಾ ಎಂದು ಜಮೀರ್ ಹೇಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ