Select Your Language

Notifications

webdunia
webdunia
webdunia
webdunia

ಶಾಸಕ ವಿನಯ್ ಕುಲಕರ್ಣಿ ಎದೆ ಬಡಿತ ಹೆಚ್ಚಿಸಿದ ನ್ಯಾಯಾಧೀಶರ ತೀರ್ಮಾನ

Vinay Kulakarni
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಯೋಗೀಶ್  ಗೌಡ ಮರ್ಡರ್ ಕೇಸ್ ನಲ್ಲಿ ದೋಷಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಇಂದು ನ್ಯಾಯಾಧೀಶರು ನೀಡಿರುವ ತೀರ್ಮಾನ ಮತ್ತೆ ಎದೆಬಡಿತ ಹೆಚ್ಚಿಸಿದೆ.

ನಿನ್ನೆ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿನಯ್ ಕುಲಕರ್ಣಿ ಮತ್ತು ಅವರ ಸಹಚರರು ದೋಷಿಗಳು ಎಂದು ತೀರ್ಪು ಬಂದಿದೆ. ಇದರ ಬೆನ್ನಲ್ಲೇ ಶಾಸಕರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಬೇಕಿತ್ತು.

ಆದರೆ ಇದಕ್ಕಿಂತ ಮೊದಲು ಇಂದು ಶಿಕ್ಷೆ ಪ್ರಮಾಣ ಕುರಿತು ಎರಡೂ ಕಡೆ ವಕೀಲರು ವಾದ ಮಂಡಿಸಿದ್ದಾರೆ. ಇಂದು ಶಾಸಕರ ಪರ ಹಿರಿಯ ವಕೀಲ ಶ್ಯಾಮಸುಂದರ್ ವಾದ ಮಂಡಿಸಿದ್ದು ಶಾಸಕರು ಅನೇಕ ಜನರ ಪ್ರತಿನಿಧಿಯಾಗಿ ಆಯ್ಕೆಯಾದವರು. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಅವರ ಸಾರ್ವಜನಿಕ ಜೀವನ ಪರಿಗಣಿಸಿ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.

ಇನ್ನು, ಇಂದೇ ತೀರ್ಪು ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಾಳೆಗೆ ತೀರ್ಪು ಕಾಯ್ದಿರಿಸಿದ್ದಾರೆ. ಹೀಗಾಗಿ ನಾಳೆಯವರೆಗೂ ಶಿಕ್ಷೆಯ ಪ್ರಮಾಣ ಎಷ್ಟು ಎಂಬುದನ್ನು ತಿಳಿಯಲು ವಿನಯ್ ಕುಲಕರ್ಣಿ ಮತ್ತು ಸಹಚರರು ಕಾಯಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಚಿಕ್ಕಮಗಳೂರಿನ ಎಂಟು ಮಂದಿ ದುರ್ಮರಣ