Publish Date: Wed, 18 Mar 2026 (08:58 IST)
Updated Date: Wed, 18 Mar 2026 (09:01 IST)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ಹಾಗೂ ಸಚಿವ ಸ್ಥಾನಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ನಡುವೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಕೆಲ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.
ಇದರಲ್ಲಿ ಮೊದಲ ಹಾಗೂ ಎರಡನೇ ಬಾರಿ ಆಯ್ಕೆಯಾದ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜಕೀಯದಲ್ಲಿ ಕೂತುಹಲದ ಬೆಳವಣಿಗೆಯಾಗಿದೆ.
ಶಾಂಗ್ರಿಲಾ ಹೊಟೇಲ್‌ನಲ್ಲಿ ಈ ಡಿನ್ನರ್ ಮೀಟಿಂಗ್ ನಡೆದಿದೆ. ಇದರಲ್ಲಿ ಸಚಿವ ಸ್ಥಾನವನ್ನು ನೀಡುವಂತೆ, ನಾಯಕತ್ವ ಬದಲಾವಣೆ ವಿಚಾರದಲ್ಲೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಇನ್ನೂ ಈ ಡಿನ್ನರ್ ಮೀಟಿಂಗ್‌ನಲ್ಲಿ ಸುಮಾರು 45 ಹೊಸ ಶಾಸಕರು ಭಾಗಿಯಾಗಿದ್ದಾರೆ.