Select Your Language

Notifications

webdunia
webdunia
webdunia
webdunia

ಪುನೀತ್ ಬದುಕಿನ ಹಾದಿ ಚಿಕ್ಕದಾದರೂ, ಸದಾ ಸ್ಫೂರ್ತಿದಾಯಕ: ಸಿಎಂ ಸಿದ್ದರಾಮಯ್ಯ

Puneet Rajkumar
Photo Credit X
ಬೆಂಗಳೂರು: ಪುನೀತ್ ಬದುಕಿನ ಹಾದಿ ಚಿಕ್ಕದು,  ಆದರೆ ಅಲ್ಪಾಯುಷ್ಯದಲ್ಲಿಯೇ ತನ್ನ ನಡೆ-ನುಡಿಯ ಮೂಲಕ ಆತ  ನೀಡಿರುವ ಜೀವನದ ಸಂದೇಶ ಸದಾ ಸ್ಮರಣೀಯ ಮತ್ತು ಸ್ಪೂರ್ತಿದಾಯಕ ಎಂದು ದಿವಂಗತ ಪುನೀತ್ ರಾಜ್‌ಕುಮಾರ್‌ ಜನ್ಮದಿನದಂದು ಸಿಎಂ ಸಿದ್ದರಾಮಯ್ಯ ಅವರು ಸ್ಮರಿಸಿಕೊಂಡರು. 

ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕಲಾ ಪ್ರತಿಭೆಯ ಜೊತೆಯಲ್ಲಿ ಸರಳತೆ, ಸಜ್ಜನಿಕೆ ಮತ್ತು ಸಮಾಜಮುಖಿ ಚಿಂತನೆಗಳಿಂದಾಗಿ ಎಳೆಯ ವಯಸ್ಸಿನಲ್ಲಿಯೇ ಎತ್ತರಕ್ಕೆ ಬೆಳೆದು ನಮ್ಮೆಲ್ಲರಲ್ಲಿ ಅಭಿಮಾನ ಮೂಡಿಸಿದ ಹುಡುಗ ಪುನೀತ್ ರಾಜ್‍ಕುಮಾರ್. 


ಪುನೀತ್ ಬದುಕಿನ ಹಾದಿ ಚಿಕ್ಕದು,  ಆದರೆ ಅಲ್ಪಾಯುಷ್ಯದಲ್ಲಿಯೇ ತನ್ನ ನಡೆ-ನುಡಿಯ ಮೂಲಕ ಆತ  ನೀಡಿರುವ ಜೀವನದ ಸಂದೇಶ ಸದಾ ಸ್ಮರಣೀಯ ಮತ್ತು ಸ್ಪೂರ್ತಿದಾಯಕ.

ಪುನೀತ್ ಇಂದು ನಮ್ಮೆಲ್ಲರನ್ನು ರಂಜಿಸುತ್ತಾ, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ತುಂಬುತ್ತಾ ನಮ್ಮ ಜೊತೆ ಇರಬೇಕಿತ್ತು ಎಂದು ಲೆಕ್ಕವಿಲ್ಲದಷ್ಟು ಸಲ ಅನ್ನಿಸಿದೆ. 

ಸಹಜ ಅಭಿನಯ, ಸನ್ನಡತೆಯಿಂದ ಕೋಟ್ಯಂತರ ಜನರ ಮನಗೆದ್ದ ಕನ್ನಡಿಗರ ಪ್ರೀತಿಯ ಅಪ್ಪುವಿನ‌‌ ಜನ್ಮದಿನದಂದು ಅವರ ಜೀವನಪ್ರೀತಿಯನ್ನು ನೆನೆದು, ನಮಿಸುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ.ಬಂಗಾಳ: ಬಿಜೆಪಿ ಬೆನ್ನಲ್ಲೇ 291 ಅಭ್ಯರ್ಥಿಗಳನ್ನು ಘೋಷಿಸಿದ ಟಿಎಂಸಿ