Publish Date: Fri, 17 Apr 2026 (08:58 IST)
Updated Date: Fri, 17 Apr 2026 (09:01 IST)
ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಇಂದು ಫೈನಲ್ ಜಡ್ಜ್ ಮೆಂಟ್ ಡೇ. ಯೋಗೇಶ್ ಗೌಡ ಮರ್ಡರ್ ಕೇಸ್ ಅಪರಾಧಿ ವಿನಯ್ ಕುಲಕರ್ಣಿ ಭವಿಷ್ಯ ಇಂದು ತೀರ್ಮಾನವಾಗಲಿದೆ.
ಧಾರವಾಡ ಬಿಜೆಪಿ ಮಾಜಿ ಜಿ.ಪಂ. ಸದಸ್ಯ ಯೋಗೇಶ್ ಗೌಡ ಮರ್ಡರ್ ಕೇಸ್ ನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಗೌಡ ಮತ್ತು ಸಹಚರರನ್ನು ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಘೋಷಿಸಿದೆ. ನಿನ್ನೆ ಶಿಕ್ಷೆ ಪ್ರಮಾಣ ಕುರಿತು ಅಪರಾಧಿಗಳ ಪರ ವಕೀಲರು ವಾದ ಮಂಡಿಸಿದ್ದರು.
ಬಳಿಕ ಜಡ್ಜ್ ಇಂದಿಗೆ ತೀರ್ಪು ಮುಂದೂಡಿದ್ದರು. ಅದರಂತೆ ಇಂದು ವಿನಯ್ ಕುಲಕರ್ಣಿ ಮತ್ತು ಸಹಚರರಿಗೆ ಎಷ್ಟು ಶಿಕ್ಷೆಯಾಗಲಿದೆ ಎಂದು ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ. ಇದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ.
ಈ ಪ್ರಕರಣದ ತೀರ್ಪು ನೀಡಲಿರುವ ಜಡ್ಜ್ ಸಂತೋಷ್ ಗಜಾನನ ಭಟ್ ನಿನ್ನೆ ವರ್ಗಾವಣೆಯಾಗಿದ್ದರು. ಆದರೆ ಈ ವರ್ಗಾವಣೆ ಆದೇಶ ಜಾರಿಯಾಗುವುದು ಜೂನ್ ನಿಂದ. ಹೀಗಾಗಿ ಇಂದು ತೀರ್ಪನ್ನು ಅವರೇ ಪ್ರಕಟಿಸಲಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ