Publish Date: Thu, 16 Apr 2026 (11:08 IST)
Updated Date: Thu, 16 Apr 2026 (11:11 IST)
ಮೈಸೂರು: ಕುಟುಂಬ ರಾಜಕಾರಣ ಮಾಡುತ್ತಿಲ್ಲ, ತಂದೆಯ ಲೆಗೆಸಿ ಮುಂದುವರಿಸಲು ರಾಜಕಾರಣಕ್ಕೆ ಬಂದೆ ಅಷ್ಟೇ ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಟ್ರೋಲ್ ಗೊಳಗಾಗಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ ಜೆಡಿಎಸ್ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಟೀಕೆ ಮಾಡಿದ್ದರು. ಈ ವೇಳೆ ನಮ್ಮದು ಕುಮಾರಸ್ವಾಮಿಯವರಂತೆ ಕುಟುಂಬ ರಾಜಕಾರಣ ಅಲ್ಲ ಎಂದಿದ್ದಾರೆ.
ನಾನು ಎಂಎಲ್ ಸಿ ಆಗಿರುವುದು ಕುಟಂಬ ರಾಜಕಾರಣಕ್ಕಾಗಿ ಅಲ್ಲ. ನಮ್ಮ ತಂದೆಯ ರಾಜಕೀಯ ಜೀವನ ಮುಂದುವರಿಸಲು ಎಂಎಲ್ ಸಿಯಾಗಿದ್ದೇನೆ. ನಮ್ಮ ಕ್ಷೇತ್ರದ ರಕ್ಷಣೆಗಾಗಿ, ನಮ್ಮ ತಂದೆಯ ಅಭಿಮಾನಿಗಳ ರಕ್ಷಣೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ವ್ಯಾಖ್ಯಾನಿಸಿದ್ದಾರೆ.
ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದೆ. ಇದೊಂಥರಾ ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗಾಯ್ತು ಎಂದು ಜನ ಕಾಮೆಂಟ್ ಮಾಡಿದ್ದಾರೆ. ನೀವು ಹೆಂಗೇ ಸಮಜಾಯಿಷಿ ಕೊಟ್ಟರೂ ಅದನ್ನು ನಾವು ಕುಟುಂಬ ರಾಜಕಾರಣ ಎಂದೇ ಕರೆಯೋದು ಎಂದು ಜನ ಕಾಲೆಳೆದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ