Select Your Language

Notifications

webdunia
webdunia
webdunia
Wednesday, 9 April 2025
webdunia

ಎರಡು ಗೊಂಬೆ ಇಟ್ಟು ಪೂಜೆ ಮಾಡಿದ್ರೆ ಭಕ್ತಿ ಬರುತ್ತಾ? ಅಯೋಧ್ಯೆ ರಾಮನ ಬಗ್ಗೆ ಸಚಿವ ಕೆಎನ್ ರಾಜಣ್ಣ ಹೇಳಿಕೆ

KN Rajanna

Krishnaveni K

ಬೆಂಗಳೂರು , ಬುಧವಾರ, 17 ಜನವರಿ 2024 (09:20 IST)
ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ಉದ್ಘಾಟನೆ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕ, ಸಹಕಾರ ಸಚಿವ ಕೆಎನ್ ರಾಜಣ್ಣ ಪ್ರಭು ರಾಮನ ಬಗ್ಗೆ ಹಗುರವಾಗಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ.

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ರಾಮನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಲಿದೆ.

ತುಮಕೂರಿನಲ್ಲಿ ಹಿಂದುಳಿದ ವರ್ಗಗಗಳ ಒಕ್ಕೂಟದ ಸಮಾರಂಭದಲ್ಲಿ ಮಾತನಾಡುವಾಗ ಕೆಎನ್ ರಾಜಣ್ಣ ‘ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ ನಂತರ ಅಲ್ಲಿಗೆ ಹೋಗಿದ್ದೆ. ಅಲ್ಲಿ ಎರಡು ಗೊಂಬೆಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋಗುವಾಗ ಸಿಗುವ  ಭಕ್ತಿ, ಧನಾತ್ಮಕತೆ ಅಲ್ಲಿ ಸಿಗುವುದಿಲ್ಲ. ರಾಮಲಲ್ಲಾ ಮೂರ್ತಿ ನೋಡಿದಾಗ ನನಗೆ ಏನೂ ಅನಿಸಲಿಲ್ಲ’ ಎಂದಿದ್ದಾರೆ.

ರಾಮನ ಬಗ್ಗೆ ಕೆಎನ್ ರಾಜಣ್ಣ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಕ್ಕೆ ಕಾಂಗ್ರೆಸ್ ನ್ನು ಬಿಜೆಪಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಕೆಎನ್ ರಾಜಣ್ಣ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುರುವಾಯೂರಿನಲ್ಲಿ ಮೋದಿ: ಪಂಚೆ ತೊಟ್ಟು ಮಿಂಚಿದ ಪ್ರಧಾನಿ