Select Your Language

Notifications

webdunia
webdunia
webdunia
webdunia

ರಾಮಮಂದಿರ ಉದ್ಘಾಟನೆಗೆ ಮೊದಲು ಅಯೋಧ್ಯೆಯಲ್ಲಿ ಹೇಮಮಾಲಿನಿ ನೃತ್ಯ

Hema Malini

Krishnaveni K

ಅಯೋಧ್ಯೆ , ಮಂಗಳವಾರ, 16 ಜನವರಿ 2024 (12:00 IST)
ಅಯೋಧ್ಯೆ: ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮೊದಲು ನಟಿ, ಸಂಸದೆ ಹೇಮಮಾಲಿನಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ. ಆ ದಿನ ಧಾರ್ಮಿಕ ಕಾರ್ಯಗಳು ಪ್ರಧಾನಿ ಮೋದಿ ನೇತೃತ್ವದಲ್ಲಿ ನೆರವೇರಲಿದೆ.

ಇದಕ್ಕೆ ಮೊದಲು ಹಲವು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರಂತೆ ಜನವರಿ 17 ರಂದು ಹೇಮಮಾಲಿನಿ ತಮ್ಮ ತಂಡದವರ ಜೊತೆ ಅಯೋಧ್ಯೆಯಲ್ಲಿ ರಾಮಾಯಣ ಆಧಾರಿತ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಜನವರಿ 17 ರಂದು ಸಂಜೆ 7 ಗಂಟೆಗೆ ಅಯೋಧ್ಯೆಯಲ್ಲಿ ನೃತ್ಯ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಅವರು ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಜೊತೆ ವಿಯೆಟ್ನಾಂನದಲ್ಲಿ ರಶ್ಮಿಕಾ ಸುತ್ತಾಟ