Publish Date: Mon, 15 Jan 2024 (17:38 IST)
Updated Date: Mon, 15 Jan 2024 (17:42 IST)
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿಯೇ ನಟ ಅಮಿತಾಭ್ ಬಚ್ಚನ್ ಕೋಟಿಗಟ್ಟಲೆ ರೂ. ನೀಡಿ ಭೂಮಿ ಖರಿದಿ ಮಾಡಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಅದಾದ ಬಳಿಕ ಅಯೋಧ್ಯೆ ದೇಶದ ಅತೀ ದೊಡ್ಡ ಪ್ರವಾಸೀ ಕೇಂದ್ರವಾಗಲಿದೆ. ಸಹಜವಾಗಿಯೇ ಇಲ್ಲಿ ಭೂಮಿ ಬೆಲೆ ಗಗನಕ್ಕೇರಲಿದೆ.
ಇದೀಗ ಅಮಿತಾಭ್ ಅಯೋಧ್ಯೆಯಲ್ಲಿ 10 ಸಾವಿರ ಚದರ ಅಡಿ ಇರುವ ಭೂಮಿ ಖರೀದಿಸಿದ್ದು, ಇದಕ್ಕೆ 14.5 ಕೋಟಿ ರೂ. ಬೆಲೆ ನೀಡಿದ್ದಾರೆ ಎನ್ನಲಾಗಿದೆ. ಈ ನಿವೇಶನ ರಾಮಮಂದಿರದಿಂದ ಕೇವಲ 15 ನಿಮಿಷದ ಅಂತರದಲ್ಲಿದೆ. ವಿಮಾನ ನಿಲ್ದಾಣದಿಂದ 30 ನಿಮಿ ದೂರದಲ್ಲಿದೆ. ಮುಂದಾಲೋಚನೆಯಿಂದ ಈಗಲೇ ಇಲ್ಲಿ ನಿವೇಶನದ ಮೇಲೆ ಹೂಡಿಕೆ ಮಾಡಿದ್ದಾರೆ.
ಮುಂದೆ ಇಲ್ಲಿ ಮನೆ ಕಟ್ಟುವ ಯೋಜನೆ ಅಮಿತಾಭ್ ಗಿದೆ ಎನ್ನಲಾಗಿದೆ. ಜನವರಿ 22 ರ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಲಾಗಿದೆ.