Select Your Language

Notifications

webdunia
webdunia
webdunia
webdunia

Karkala: ಮೊಬೈಲ್ ಚಾರ್ಜ್ ಗಿಟ್ಟು ಮಲಗಿದ್ದ ಕುಟುಂಬ, ಇಡೀ ಮನೆಯೇ ಸುಟ್ಟೋಯ್ತು

Karakala Mobile blast

Krishnaveni K

ಕಾರ್ಕಳ , ಮಂಗಳವಾರ, 18 ಫೆಬ್ರವರಿ 2025 (10:44 IST)
ಕಾರ್ಕಳ: ಮೊಬೈಲ್ ಚಾರ್ಜ್ ಗಿಟ್ಟು ರಾತ್ರಿ ಮಲಗುವ ಅಭ್ಯಾಸವಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಈ ರೀತಿ ಮಾಡಿ ಇಡೀ ಮನೆಯೇ ಸುಟ್ಟು ಹೋದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರು ರಸ್ತೆಯಲ್ಲಿ ನಡೆದಿದೆ.

ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ರಾತ್ರಿ ಮಲಗುವ ಮುನ್ನ ಸೋಫಾ ಮೇಲೆ ಮೊಬೈಲ್ ಇಟ್ಟು ಚಾರ್ಜ್ ಮಾಡಲಿಟ್ಟಿದ್ದರು. ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟಗೊಂಡಿದೆ.

ಕಿಶೋರ್ ಕುಮಾರ್ ಅವರದ್ದು ಎರಡು ಅಂತಸ್ತುಗಳ ಆರು ಕೊಠಡಿಗಳ ಮನೆಯಾಗಿದೆ. ಒಂದು ಚಿಕ್ಕ ಮೊಬೈಲ್ ಸ್ಪೋಟಗೊಂಡ ತೀವ್ರತೆ ಎಷ್ಟಿತ್ತೆಂದರೆ ಇಡೀ ಮನೆಯೇ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿರುವ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದೆ.

ತಕ್ಷಣವೇ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಮನೆಯಲ್ಲಿ ಏರ್ ಕಂಡೀಷನ್ ಕೂಡಾ ಆನ್ ಆಗಿತ್ತು. ಹೀಗಾಗಿ ಬೆಂಕಿ ಹರಡಿರಬಹುದು ಎಂದು ಶಂಕಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೊ ಟಿಕೆಟ್ ದರ ಇಳಿಸಲೂ ಪ್ರಸ್ತಾವನೆ ಸಲ್ಲಿಸಲು ಏನು ಪ್ರಾಬ್ಲಂ: ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ