Select Your Language

Notifications

webdunia
webdunia
webdunia
webdunia

ಮಗು ಆದ ಮೇಲೆ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಶಿಕ್ಷಕಿ ಇದೇನು ಮಾಡಿಬಿಟ್ಟಳು

Hosmar Primary School Teacher, Prasanna Teacher No More, Karkala Taluk Crime Case

Sampriya

ಕಾರ್ಕಳ , ಗುರುವಾರ, 7 ನವೆಂಬರ್ 2024 (17:25 IST)
ಕಾರ್ಕಳ: ಮದುವೆಯಾಗಿ, ಮಗು ಆದ್ಮೇಲೆ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಖಿನ್ನತೆಗೆ ಒಳಗಾಗಿದ್ದ ಶಿಕ್ಷಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರ್ಕಳ ತಾಲ್ಲೂಕಿನ ಈದು ಗ್ರಾಮದಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು ಪ್ರಸನ್ನಾ ಎಂದು ಗುರುತಿಸಲಾಗಿದೆ.

2022ರಲ್ಲಿ ಕಾರ್ಕಳದ ಈದು ಗ್ರಾಮದ ರಾಜೇಶ್ ಅವರನ್ನು ಮದುವೆಯಾಗಿದ್ದ ಪ್ರಸನ್ನಾ ಅವರಿಗೆ ಒಂದು ಹೆಣ್ಣು ಮಗುವಿದೆ. ಇವರ ಪತಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದಾರೆ. ಪ್ರಸನ್ನಾ ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಯಿ ಮನೆಯವರಲ್ಲಿ ಮಾತನಾಡುವಾಗ ಗಂಡನ ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಇಷ್ಟು ಬೇಗ ಮಗು ಬೇಡವಾಗಿತ್ತು. ಮಗು ಆದ್ಮೇಲೆ ಕೆಲಸಕ್ಕೆ ಹೋಗಕ್ಕೆ ಆಗುತ್ತಿಲ್ಲ ಎಂದು ಹೇಳುತ್ತಿದ್ದರು. ಇದರಿಂದನೇ ಖಿನ್ನತೆಗೆ ಒಳಗಾಗಿದ್ದ ಪ್ರಸನ್ನಾಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನವೆಂಬರ್ 6ರಂದು ಮನೆಯ ಡೈನಿಂಗ್ ಹಾಲ್‌ನಿಂದ ಮಹಡಿಗೆ ಹೋಗುವ ಮೆಟ್ಟಿಲಿನ ಸ್ಟೀಲ್ ರಾಡಿಗೆ ಚೂಡಿದಾರ ಶಾಲ್ ನಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡತನ ನಿರ್ಮೂಲನೆ ಮಾಡಿದ್ದು ಇಂದಿರಾ ಗಾಂಧಿ, ಬಿಜೆಪಿಯವರು ಏನು ಮಾಡಿದ್ದಾರೆ: ಸಿದ್ದರಾಮಯ್ಯ